ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲೇಜುಗಳಲ್ಲಿ ರ್ಯಾಗಿಂಗ್ ನಿಷೇಧವಿದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮವಿದೆ. ಜೊತೆಗೆ ರ್ಯಾಗಿಂಗ್ ಮಾಡಿದವರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗುತ್ತದೆ. ಇಷ್ಟೆಲ್ಲಾ ಕ್ರಮಗಳಿದ್ದರೂ ತಮಿಳುನಾಡು ರಾಜ್ಯದ ವೆಲ್ಲೂರಿನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ (ಸಿಎಂಸಿ) ಸೀನಿಯರ್ ವಿದ್ಯಾರ್ಥಿಗಳ ಪೈಶಾಚಿಕ ವರ್ತನೆ ಮಿತಿಮೀರಿದೆ.
ಕಿರಿಯ ವಿದ್ಯಾರ್ಥಿಗಳನ್ನು ಅರೆಬೆತ್ತಲೆ ಮಾಡಿಸಿ ಕ್ಯಾಂಪಸ್ ಪೂರ್ತಿ ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೆ ಅರೆಬೆತ್ತಲೆಯಾಗಿಯೇ ಅವರೊಂದಿಗೆ ಕ್ಯಾಟ್ ವಾಕ್ ಮಾಡಿಸಿದ್ದು, ಪೈಪ್ಗಳಿಂದ ನೀರು ಪಂಪ್ ಮಡಿದ್ದಾರೆ. ದೊಣ್ಣೆ ಮತ್ತು ಬೆಲ್ಟ್ಗಳಿಂದ ಹೊಡೆದಿದ್ದಲ್ಲದೆ ಕೆಲಸರು ನೀರಿನಲ್ಲಿ ಮಲಗುವಂತೆ ತಾಕೀತು ಮಾಡಿದರು. ಇದನ್ನೂ ಮೀರಿ ನಡೆದುಕೊಂಡ ಓರ್ವ ಸೀನಿಯರ್ ಜೂನಿಯರ್ ಹುಡುಗರ ಖಾಸಗಿ ಅಂಗಕ್ಕೆ ಜೋರಾಗಿ ಹೊಡೆದು ಅವರನ್ನು ನಾನಾ ರೀತಿಯಲ್ಲಿ ಹಿಂಸಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆ ವ್ಯಕ್ತವಾದ ಕಾರಣ ಕಾಲೇಜು ಆಡಳಿತ ಮಂಡಳಿ ಗಂಭೀರವಾಗಿ ಪ್ರತಿಕ್ರಿಯಿಸಿದೆ. ರ್ಯಾಗಿಂಗ್ನಲ್ಲಿ ತೊಡಗಿದ್ದ ಏಳು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ. ಇಂತಹ ನೀಚರನ್ನು ಅಮಾನತು ಆಡಿದರೆ ಸಾಲದು ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದರು.
Video proof of severe ragging in Christian Medical College, Vellore. Kindly share and expose the acts occuring here for society to know the problems in not only this institution but widespread among other medical colleges in various degrees. pic.twitter.com/si6lAGCZh0
— cmcvellorestudent (@studenxperience) November 6, 2022