ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ಬೆಳಿಗ್ಗೆ ಭಾರತದ ಈಕ್ವಿಟಿ ಮಾರುಕಟ್ಟೆಗಳು ಕ್ಷೀಣವಾಗಿ ತೆರೆದಿವೆ. ನಿನ್ನೆಯಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದು ಇಂದು ಮಾರುಕಟ್ಟೆಯಲ್ಲಿ ಚಂಚಲತೆಯನ್ನು ಮತ್ತಷ್ಟು ಪ್ರಭಾವಿಸಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 463 ಪಾಯಿಂಟ್‌ಗಳು ಅಥವಾ ಶೇಕಡಾ 0.7 ರಷ್ಟು ಕುಸಿದು 59,245 ಮಟ್ಟದಲ್ಲಿದ್ದರೆ, ನಿಫ್ಟಿ 50ಯು 163 ಪಾಯಿಂಟ್ ಕುಸಿದು 17,450 ಅಂಕಗಳಲ್ಲಿ ವಹಿವಾಟು ನಡೆಸಿದೆ.
ವಿಶಾಲ ಮಾರುಕಟ್ಟೆಗಳಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.7 ರವರೆಗೆ ಕುಸಿದವು.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್:
ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಎಚ್‌ಡಿಎಫ್‌ಸಿ ಲೈಫ್, ಎಸ್‌ಬಿಐ, ಯುಪಿಎಲ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಆರಂಭಿಕ ವ್ಯವಹಾರಗಳಲ್ಲಿ ಶೇಕಡಾ 9.5 ರಷ್ಟು ಕುಸಿದಿವೆ. ಎಸ್‌ಬಿಐ ಲೈಫ್, ಇನ್ಫೋಸಿಸ್, ಐಟಿಸಿ, ಟೆಕ್ ಎಂ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ಶೇ 1.5 ರಷ್ಟು ಲಾಭದೊಂದಿಗೆ ದಾಪುಗಾಲು ಹಾಕಿವೆ.