ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಬೆಳವಣಿಗೆಗಳ ಮುನ್ಸೂಚನೆಯಿದ್ದರೂ ಭಾರತದ ಶೇರು ಪೇಟೆಯು ಕುಸಿತ ಕಂಡಿದೆ. ಇಂದು ಬೆಳಿಗ್ಗೆ ಮಾರುಕಟ್ಟೆ ಪ್ರಾಂಭವಾದ ಹದಿನೈದು ನಿಮಿಷಗಳಲ್ಲಿ ಸೆನ್ಸೆಕ್ಸ್ 377.58 ಪಾಯಿಂಟ್ (0.72%) ಕುಸಿದು 52154.49 ಕ್ಕೆ ಇಳಿದಿದೆ. ಹಾಗೂ ನಿಫ್ಟಿಯು 119.80 ಪಾಯಿಂಟ್ (0.77 %) ರಷ್ಟು ಕುಸಿದು 15519 ಕ್ಕೆ ತಲುಪಿದೆ.
ಮದ್ಯಾಹ್ನದ ವರೆಗೂ ಡೌನ್ ಟ್ರೆಂಡ್ ಮುಂದುವರೆದಿದ್ದು 12.30ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 544.33 (1.04%) ಕುಸಿದಿದ್ದರೆ ನಿಫ್ಟಿಯು 187.35 ಪಾಯಿಂಟ್ ಗಳಷ್ಟು ಕುಸಿತಕಂಡಿದೆ.
ಟಾಪ್ ಗೇನರ್ಸ್: & ಟಾಪ್ ಲೂಸರ್ಸ್
ಡಾ ರೆಡ್ಡೀಸ್, ಎಚ್ಯುಎಲ್, ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿ ಮತ್ತು ಸನ್ ಫಾರ್ಮಾಗಳು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಬೆರಳೆಣಿಕೆಯಷ್ಟು ಲಾಭಗಳಿಸಿದ್ದರೆ ಟಾಟಾ ಸ್ಟೀಲ್, ಎನ್ಟಿಪಿಸಿ, ವಿಪ್ರೋ, ಟೆಕ್ ಎಂ, ಎಚ್ಸಿಎಲ್ ಟೆಕ್, ಇಂಡಸ್ಇಂಡ್ ಬ್ಯಾಂಕ್, ಟೈಟಾನ್ ಮತ್ತು ರಿಲಯನ್ಸ್ ಸೆನ್ಸೆಕ್ಸ್ನಲ್ಲಿ ಶೇ 3 ರವರೆಗೆ ನಷ್ಟ ಕಂಡಿವೆ. ನಿಫ್ಟಿಯಲ್ಲಿ ಹಿಂಡಾಲ್ಕೊ, ಒಎನ್ಜಿಸಿ, ಜೆಎಸ್ಡಬ್ಲ್ಯೂ ಸ್ಟೀಲ್ ಟಾಪ್ ಲೂಸರ್ಗಳಾಗಿವೆ.