‘ಎಲ್ಲರನ್ನೂ ನರಕಕ್ಕೆ ಕಳುಹಿಸಿದ್ದೇವೆ’: ಪಾಕ್ ಸೇನೆಯಿಂದ 9 ಉಗ್ರರ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ವಾಯುಪಡೆ ತರಬೇತಿ (Pakistan Air Force Base) ನೆಲೆಯ ಮೇಲೆ ದಾಳಿ ನಡೆಸಿದ್ದ 9 ಉಗ್ರರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ.

ಇಂದು (ಶನಿವಾರ) ಮುಂಜಾನೆ ಒಂಬತ್ತು ಶಸ್ತ್ರಸಜ್ಜಿತ ಭಯೋತ್ಪಾದಕರು ವಾಯುಪಡೆ ತರಬೇತಿ ನೆಲೆ ಮೇಲೆ ದಾಳಿ ನಡೆಸಿದ್ದರು. ಇದೀಗ ಅವರೆಲ್ಲರನ್ನೂ ನರಕಕ್ಕೆ ಕಳುಹಿಸಲಾಗಿದೆ ಎಂದು ಪಾಕ್‌ ಸೇನೆ ಹೇಳಿದೆ. ದೇಶದಲ್ಲಿ ಮೂರು ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ 17 ಸೈನಿಕರು ಸಾವಿಗೀಡಾಗಿದ್ದಾರೆ.

ಪಾಕಿಸ್ತಾನದ ವಾಯುಪಡೆಯ ಮಿಯಾನ್‌ವಾಲಿ ತರಬೇತಿ ವಾಯುನೆಲೆಯ ಮೇಲೆ ಒಂಬತ್ತು ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಕಾರ್ಯನಿರ್ವಹಿಸದ ಮೂರು ವಿಮಾನಗಳಿಗೆ ಹಾನಿಯಾಗಿತ್ತು.
ಪಿಎಎಫ್ ತರಬೇತಿ ಏರ್‌ಬೇಸ್ ಮಿಯಾನ್‌ವಾಲಿಯಲ್ಲಿ ಕೂಂಬಿಂಗ್ ಮತ್ತು ಕ್ಲಿಯರೆನ್ಸ್ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ. ಎಲ್ಲಾ ಒಂಬತ್ತು ಭಯೋತ್ಪಾದಕರನ್ನು ನರಕಕ್ಕೆ ಕಳುಹಿಸಲಾಗಿದೆ ಎಂದು ಮಿಲಿಟರಿ ದೃಢಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!