ಕಾಫಿ ಎಸ್ಟೇಟ್‌ಗಳಿಂದ ಸೆರೆಹಿಡಿಯಲಾದ ಆನೆಗಳಿಗಾಗಿ ಪ್ರತ್ಯೇಕ ಸ್ಥಳ: ಈಶ್ವರ ಖಂಡ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಫಿ ಎಸ್ಟೇಟ್‌ಗಳಲ್ಲಿ ಕಾಣಸಿಗುವ ಆನೆಗಳನ್ನು ಸೆರೆಹಿಡಿಯಲಾಗುತ್ತದೆ. ಆದರೆ ಆನಂತರ ಆ ಆನೆಗಳನ್ನು ಕಾಡಿಗೆ ಬಿಡಲಾಗುತ್ತದಾ? ಅಥವಾ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗುತ್ತದಾ? ಈ ಬಗ್ಗೆ ಪರಿಸರ ಇಲಾಖೆ ಸಚಿವ ಈಶ್ವರ್ ಬಿ ಖಂಡ್ರೆ ಮಾಹಿತಿ ನೀಡಿದ್ದಾರೆ.

ಕಾಫಿ ಎಸ್ಟೇಟ್‌ಗಳಿಂದ ಸೆರೆಹಿಡಿಯಲಾದ ಆನೆಗಳನ್ನು ಇರಿಸಲು ಪ್ರತ್ಯೇಕ ಸ್ಥಳ ಗುರುತಿಸಲಾಗುವುದು ಎಂದು ಹೇಳಿದ್ದಾರೆ. ಇಲಾಖೆ ಪ್ರಸ್ತಾಪಿಸಿರುವ ಸ್ಥಳ ಭದ್ರಾ ವನ್ಯಜೀವಿಧಾಮದಲ್ಲಿದೆ. ಅಲ್ಲದೆ, ಇದಕ್ಕಾಗಿ 100 ಕೋಟಿ ರೂಪಾಯಿ ಬಜೆಟ್‌ನ ಅಗತ್ಯವಿದ್ದು, ಅನುಮೋದನೆಗಾಗಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.

ಕಾಫಿ ಎಸ್ಟೇಟ್‌ಗಳಲ್ಲಿ ವಾಸಿಸುವ ಆನೆಗಳು, ಕೆಲವು ಎರಡನೇ ಅಥವಾ ಮೂರನೇ ತಲೆಮಾರಿನವಾಗಿದ್ದು, ಅವು ಅರಣ್ಯ ಪ್ರದೇಶವನ್ನು ನೋಡಿಲ್ಲ. ಅವುಗಳನ್ನು ಸೆರೆಹಿಡಿದು ಕಾಡಿಗೆ ಬಿಡಲಾಗುವುದಿಲ್ಲ. ಅವುಗಳನ್ನು ಆನೆ ಶಿಬಿರಗಳಲ್ಲಿ ಇರಿಸಲು ಸಾಧ್ಯವಿಲ್ಲ. ಹಾಗಾಗಿ ಐಐಎಸ್‌ಸಿ ಸೇರಿದಂತೆ ಆನೆ ತಜ್ಞರನ್ನೊಳಗೊಂಡ ಸಮಿತಿಯು ಕಾಫಿ ಎಸ್ಟೇಟ್‌ಗಳಿಂದ ಸೆರೆಹಿಡಿಯಲಾದ ಆನೆಗಳನ್ನು ಕಾಡಿಗೆ ಬಿಡುವ ಮುನ್ನ ಸಮೀಪದ ಅರಣ್ಯ ಪ್ರದೇಶಕ್ಕೆ ಒಗ್ಗುವಂತೆ ಮಾಡಲು ಅರಣ್ಯ ಪ್ರದೇಶಕ್ಕೆ ಸಮಾನವಾದ ಜಾಗವನ್ನು ಗುರುತಿಸುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!