ಜೈಲಿನ ಕೈದಿಗಳಿಗಾಗಿ ಪ್ರತ್ಯೇಕ ‘S*X ROOM’ ವ್ಯವಸ್ಥೆ: ಜಗತ್ತಿಗೇ ಶಾಕ್ ನೀಡಿದ ಇಟಲಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜೈಲು ಕೈದಿಗಳಿಗೆ ಖಾಸಗಿ ಭೇಟಿ ಮತ್ತು ಏಕಾಂತ ಸಾಂವಿಧಾನಿಕ ಹಕ್ಕು ಎಂಬ ನ್ಯಾಯಾಲಯದ ತೀರ್ಪಿನ ನಂತರ ಇಟಲಿ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇಟಲಿ ಸರ್ಕಾರದ ಈ ನಿರ್ಧಾರ ಈವರೆಗೂ ಯಾವ ದೇಶಗಳೂ ತೆಗೆದುಕೊಂಡಿಲ್ಲ!

ಇಟಲಿ ಸರ್ಕಾರ ಕೈದಿಗಳಿಗಾಗಿ ಜೈಲಿನಲ್ಲೇ ಸೆಕ್ಸ್ ರೂಂ ತೆರೆದಿದೆ. ಕೈದಿಗಳ ನೋಡಲು ಬರುವ ಸಂಗಾತಿಗಳು ಅಥವಾ ಹೊರಗಿನಿಂದ ಭೇಟಿ ನೀಡುವ ಪಾಲುದಾರರೊಂದಿಗೆ ಕೈದಿಗಳು “ಆಪ್ತ ಸಭೆಗಳನ್ನು” ನಡೆಸಲು ಇಟಲಿ ಸರ್ಕಾರ ಇದೇ ಮೊದಲ ಬಾರಿಗೆ ಸೆಕ್ಸ್ ರೂಂ ಗಳನ್ನು ತೆರೆದಿದೆ. ಇಟಲಿಯ ಮೊದಲ ಕೈದಿಗಳ ಲೈಂಗಿಕ ಕೊಠಡಿ ಶುಕ್ರವಾರ ಕಾರ್ಯರೂಪಕ್ಕೆ ಬಂದಿದೆ.

ಮಧ್ಯ ಉಂಬ್ರಿಯಾ ಪ್ರದೇಶದ ಜೈಲಿನಲ್ಲಿರುವ ಈ ಸೆಕ್ಸ್ ರೂಂ ತೆರೆಯಲಾಗಿದ್ದು, ಈ ವಿಶೇಷ ಸೌಲಭ್ಯದಲ್ಲಿ ಕೈದಿಯೊಬ್ಬನಿಗೆ ತನ್ನ ಮಹಿಳಾ ಸಂಗಾತಿಯಿಂದ ಭೇಟಿಗೆ ಅವಕಾಶ ನೀಡಲಾಯಿತು.

ಈ ಬಗ್ಗೆ ಮಾಹಿತಿ ನೀಡಿರುವ ಉಂಬ್ರಿಯಾದ ಕೈದಿಗಳ ಹಕ್ಕುಗಳ ಒಂಬುಡ್ಸ್‌ಮನ್ ಗೈಸೆಪ್ಪೆ ಕ್ಯಾಫೊರಿಯೊ ಅವರು, ‘ಎಲ್ಲವೂ ಸುಗಮವಾಗಿ ನಡೆದ ಕಾರಣ ನಮಗೆ ಸಂತೋಷವಾಗಿದೆ. ಆದರೆ ಈ ಸೆಕ್ಸ್ ರೂಂಗೆ ಬರುವ ವ್ಯಕ್ತಿಗಳ ಖಾಸಗಿ ತನ ರಕ್ಷಿಸಲು ಗರಿಷ್ಠ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಒಂದು ರೀತಿಯ ಪ್ರಯೋಗ ಚೆನ್ನಾಗಿ ನಡೆಯಿತು ಎಂದು ನಾವು ಹೇಳಬಹುದು ಮತ್ತು ಮುಂದಿನ ಕೆಲವು ದಿನಗಳಲ್ಲಿ ಇತರೆ ಸಭೆಗಳು ಇರುತ್ತವೆ ಎಂದು ಹೇಳಿದರು.

ಇನ್ನು ಜೈಲಿನಲ್ಲಿರುವ ಕೈದಿಗಳಿಗೂ ಖಾಸಗಿತನ ಇರಬೇಕು ಎಂದು ಈ ಹಿಂದೆ ಇಟಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಜನವರಿ 2024 ರಲ್ಲಿ ಪ್ರಕಟವಾದ ತೀರ್ಪಿನಲ್ಲಿ, ನ್ಯಾಯಾಲಯವು ಕೈದಿಗಳು ಸಂಗಾತಿಗಳು ಅಥವಾ ದೀರ್ಘಾವಧಿಯ ಪಾಲುದಾರರೊಂದಿಗೆ ಖಾಸಗಿ ಮೀಟಿಂಗ್ ಗಳನ್ನು ನಡೆಸುವ ಹಕ್ಕನ್ನು ಹೊಂದಿರಬೇಕು ಮತ್ತು ಅವರ ಮೇಲ್ನಿಚಾರಣೆಗೆ ಅಲ್ಲಿ ಯಾವುದೇ ಜೈಲು ಸಿಬ್ಬಂದಿ ಇರಬಾರದು ಎಂದು ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!