Tuesday, December 2, 2025

ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ ಸರಣಿ ಅಪಘಾತ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಆವರಣದಲ್ಲಿ ಕ್ಯಾಬ್‌ಗಳ ನಡುವೆ ಸರಣಿ ಸಂಭವಿಸಿದ್ದು, ಕೆಲವು ಕಾರುಗಳ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮುಂದೆ ಹೋಗುತ್ತಿದ್ದ ಕಾರು ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ. ಮೊದಲ ಡಿಕ್ಕಿಯ ನಂತರ ಇನ್ನೂ ಹಲವು ಕ್ಯಾಬ್‌ಗಳು ಕ್ರಮವಾಗಿ ಪರಸ್ಪರ ಡಿಕ್ಕಿ ಹೊಡೆದು ಸರಣಿ ಅಪಘಾತಕ್ಕೆ ಕಾರಣವಾಗಿವೆ. ಕಾರಿನ ವೇಗ ಮತ್ತು ಸಮೀಪದ ವಾಹನಗಳ ನಡುವೆ ಅಂತರ ಉಳಿಸದಿರುವುದು ಅಪಘಾತದ ತೀವ್ರತೆಯನ್ನು ಹೆಚ್ಚಿಸಿದೆ.

ಅಪಘಾತದ ರಭಸಕ್ಕೆ ಹಲವು ಕಾರುಗಳು ಗಂಭೀರವಾಗಿ ಹಾನಿಗೊಳಗಾದರೂ, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ವಿಮಾನ ನಿಲ್ದಾಣದ ಸುರಕ್ಷತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅಪಘಾತದಿಂದ ಏರ್ಪೋರ್ಟ್ ಆವರಣದಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾದರೂ, ಹಾನಿಗೀಡಾದ ವಾಹನಗಳನ್ನು ಸ್ಥಳಾಂತರಿಸಿದ ನಂತರ ಸಂಚಾರ ಮತ್ತೆ ಯಥಾಸ್ಥಿತಿಗೆ ಬಂತು. ಈ ಘಟನೆ ಬಳಿಕ ಪ್ರಯಾಣಿಕರು ಮತ್ತು ವಾಹನ ಚಾಲಕರು ಸುರಕ್ಷತಾ ಕ್ರಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

error: Content is protected !!