Sunday, January 11, 2026

ಕಲಬುರಗಿಯಲ್ಲಿ 2 ಸರ್ಕಾರಿ ಬಸ್- ಜೀಪ್ ಮಧ್ಯೆ ಸರಣಿ ಅಪಘಾತ, ಮೂವರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ಕೆಎಸ್​​ಆರ್​​ಟಿಸಿ ಬಸ್​ ಮತ್ತು ಜೀಪ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಗಂಡ ಹೆಂಡತಿ ಸೇರಿ ಮೂವರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿಯ ಸಂಚಾರಿ ಠಾಣೆ 1ರ ವ್ಯಾಪ್ತಿಯಲ್ಲಿ ನಡೆದಿದೆ.

ಸುಲೋಚನಾ(70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್(35) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮೃತರು ಅಫಜಲಪುರ ತಾಲ್ಲೂಕಿನ ತೆಲ್ಲೂಣಗಿ ಗ್ರಾಮದ ನಿವಾಸಿಗಳು. ದಂಪತಿ ತಮ್ಮ ಗ್ರಾಮದಿಂದ ಕಲಬುರಗಿಗೆ ಜೀಪ್​​ನಲ್ಲಿ ತೆರಳುತ್ತಿದ್ದರು. ಅತಿವೇಗದ ಚಾಲನೆನಿಂದ ಎದುರಿಗೆ ಬರುತ್ತಿದ್ದ ಬಸ್​ಗೆ ಜೀಪ್ ಡಿಕ್ಕಿ ಹೊಡೆದು ಅಪಘಾತ‌ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಂಪತಿ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್​​.ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಕೂಡ ವಿಚಾರಿಸಿದ್ದಾರೆ.

error: Content is protected !!