ಹೊಸದಿಗಂತ ವರದಿ, ಪುತ್ತೂರು:
ಆಕ್ಟಿವಾ-ಬೊಲೆರೋ-ಆಲ್ಟೋ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಆಲ್ಟೋ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಂಬ್ರ ಸಮೀಪದ ಶೇಖಮಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಡಿಕೇರಿ ಸೋಮವಾರಪೇಟೆಯ ತ್ಯಾಗತೂರಿನ ಲೋಕೇಶ್(48), ರವೀಂದ್ರ(57) ಎಂದು ಗುರುತಿಸಲಾಗಿದೆ. ಮೃತ ರವೀಂದ್ರ ಅವರು ಟ್ಯಾಂಕರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಲೋಕೇಶ್ ಅವರು ಲಾರಿ ಚಾಲಕರಾಗಿದ್ದು, ಬಿಡಿ ಭಾಗಗಳನ್ನು ಖರೀದಿಸಲೆಂದು ಮಂಗಳೂರಿಗೆ ತೆರಳಿದ್ದವರು ವಾಪಸ್ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಬೊಲೆರೋ ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆಕ್ಟಿವಾ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂಪೂರ್ಣ ನಿಯಂತ್ರಣ ಕಳಕೊಂಡಿದ್ದ ಆಲ್ಟೋ ಕಾರು ಎದುರುಗಡೆಯಿಂದ ಬರುತ್ತಿದ್ದ ಆಕ್ಟಿವಾಗೆ ಮತ್ತು ಬೋಲೇರೋಗೆ ಡಿಕ್ಕಿ ಹೊಡೆದಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.