ಅತ್ತ ಮತಗಳ್ಳತನದ ಕುರಿತು ಸರಣಿ ಆರೋಪ: ಇತ್ತ ಚುನಾವಣೆ ಆಯೋಗಕ್ಕೆ ದೂರು ನೀಡಲು ರಾಹುಲ್ ಗಾಂಧಿ ಹಿಂದೇಟು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಮತಗಳ್ಳತನವಾಗಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಈ ಮತಗಳ್ಳತನ ವಿರುದ್ಧ ಸಮರ ಸಾರಿರುವ ರಾಹುಲ್, ಚುನಾವಣೆ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆದ್ರೆ ಮತಗಳ್ಳತನ ವಿರುದ್ಧ ಕರ್ನಾಟಕ ಚುನಾವಣೆ ಆಯೋಗಕ್ಕೆ ದೂರು ನೀಡದೇ ರಾಹುಲ್ ಗಾಂಧಿ ಹಾಗೇ ದೆಹಲಿಗೆ ಹಾರಿದ್ದಾರೆ. ಬರೀ ಬಾಯಲ್ಲೇ ಆರೋಪ ಮಾಡಿ ದೂರು ನೀಡದೇ ಹೋಗಿದ್ಯಾಕೆ ಎನ್ನುವ ಚರ್ಚೆಗಳು ಶುರುವಾಗಿವೆ.

ದೆಹಲಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮತಗಳ್ಳತನದ ಬಗ್ಗೆ ಹೇಳಿಕೆ ನಿದೂರ್ವಾ ರಾಹುಲ್​ ಗಾಂಧಿ ಇಂದು ಬೆಂಗಳೂರಿನಲ್ಲಿ ಅಬ್ಬರಿಸಿದರು. ಫ್ರೀಡಂ ಪಾರ್ಕ್​​​ ನಲ್ಲಿ ಆಯೋಜಿಸಲಾಗಿದ್ದ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟದಲ್ಲಿ ರಾಹುಲ್​ ಗಾಂಧಿ, ಕೇಂದ್ರದ ಚುನಾವಣಾ ಆಯೋಗದ ವಿರುದ್ಧ ಗುಡುಗಿದರು ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮತ್ತೊಮ್ಮೆ ಸಂವಿಧಾನ ಪುಸ್ತಕ ಹಿಡಿದು ವಾಗ್ದಾಳಿ ನಡೆಸಿದರು. ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ ಪುನರುಚ್ಛರಿಸಿರು. ಇಷ್ಟೆಲ್ಲಾ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಪ್ರತಿಭಟನಾ ಸಮಾವೇಶ ಮುಗಿಯುತ್ತಿದ್ದಂತೆಯೇ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋಗಲಿಲ್ಲ. ಬದಲಿಗೆ ಖಾಸಗಿ ಹೋಟೆಲ್​​ ಗೆ ತೆರಳಿ ಅಲ್ಲಿಂದ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಭೋಜನ ಸವಿದು ದೆಹಲಿಗೆ ಹಾರಿದ್ದಾರೆ.

ಆದ್ರೆ, ಇತ್ತ ಚುನಾವಣಾ ಆಯೋಗಕ್ಕೆ ಯಾವುದೇ ದೂರು ನೀಡಿಲ್ಲ. ಬರೀ ಮಾತಲ್ಲೇ ಮನೆ ಕಟ್ಟಿದ್ರಾ? ಅಂಕಿ-ಸಂಖ್ಯೆ ಸಮೇತ ದಾಖಲೆ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿ ಏಕೆ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ ಎನ್ನುವ ಚರ್ಚೆಗಳು ಶುರುವಾಗಿವೆ.

ರಾಹುಲ್ ಏಕೆ ಆಯೋಗಕ್ಕೆ ದೂರು ನೀಡಿಲ್ಲ
ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣೆ ಆಯೋಗ, ಮತಗಳ್ಳತನ ಆರೋಪಕ್ಕೆ ಸಾಕ್ಷ್ಯ ನೀಡಿ ತನಿಖೆ ಮಾಡುತ್ತೇವೆ ಎಂದಿದೆ. ಡಿಕ್ಲರೇಷನ್​ ಗೆ ಸಹಿ ಹಾಕುವಂತೆ ರಾಹುಲ್ ಗಾಂಧಿಗೆ ತಾಕೀತು ಮಾಡಿದೆ. ಇಲ್ಲದಿದ್ರೆ ಕ್ಷಮೆ ಕೇಳಿ ಎಂದು ಆಯೋಗ ಹೇಳಿದೆ. ಇನ್ನು ಡಿಕ್ಲರೇಷನ್​ ಗೆ ಸಹಿ ಹಾಕಿದರೆ ಮುಂದೆ ಕಾನೂನಾತ್ಮಕ ಸಮಸ್ಯೆ ಸಾಧ್ಯತೆ ಇದೆ. ಕಾನೂನಿಗೆ ಹೆದರಿ ದೂರು ನೀಡಲು ರಾಹುಲ್‌ ಗಾಂಧಿ ಹಿಂದೇಟು ಹಾಕಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!