ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯನ ಸರಣಿ ಹೃದಯಾಘಾತ ಸಾವು ಪ್ರಕರಣಗಳ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಕಳವಳ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲೂಕು ಧರ್ಮಪುರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನದಲ್ಲಿ ಪದೇ ಪದೇ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿವೆ.
ಇದಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ನಗೆಪಾಟಲಿಗೆ ಒಳಗಾಗಿದೆ. ದೆಹಲಿಯ ಏಮ್ಸ್ ಮತ್ತು ಜಯದೇವ ಮುಚ್ಚಿಹಾಕಲಾಗಿದೆ. ಆಸ್ಪತ್ರೆಯ ಕೋವಿಡ್ ರಿಪೋರ್ಟ್‌ಗಳನ್ನು ಲಸಿಕೆ ಎಲ್ಲೆಡೆ ನೀಡಲಾಗಿದ್ದರೂ, ಕೇವಲ ಹಾಸನದಲ್ಲಿ ಮಾತ್ರ ಈ ಸಾವುಗಳು ಏಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಬೇರೆಯೇ ಕಾರಣವಿರಬೇಕು. ಸರ್ಕಾರ ಈ ಕಾರಣವನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.