ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನೀರು ಹರಿಬಿಡುವಂತೆ ಸುಪ್ರೀಂಕೋರ್ಟ್ ನಿನ್ನೆ ಆದೇಶ ನೀಡಿದ್ದು, ಇಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ, ಹೀಗಾಗಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲು ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ.
ತಮಿಳುನಾಡಿಗೆ ನೀರು ಹರಿಬಿಡಲು ಆದೇಶ ನೀಡಿರುವುದರಿಂದ ಹೋರಾಟ ತೀವ್ರಗೊಂಡಿದ್ದು, ಜಿಲ್ಲೆಯಲ್ಲಿಂದು ರೈತರು, ಕನ್ನಡ ಸಂಘಟನೆಗಳಿಂದ ಸರಣಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.
ಟಿ.ಕೆ. ಪಂಪ್‌ಹೌಸ್‌ಗೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಲಿವೆ, ಇಡೀ ಬೆಂಗಳೂರಿಗೆ ಇಲ್ಲಿಂದಲೇ ನೀರು ಸರಬರಾಜು ಆಗಲಿದೆ. ಬೆಂಗಳೂರಿಗೆ ನೀರು ಸರಬರಾಜು ನಿಲ್ಲಿಸಿ ಅದೇ ನೀರನ್ನು ರೈತರಿಗೆ ನೀಡಿ ಎಂದು ಆಗ್ರಹಿಸಲಿದ್ದಾರೆ.