ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನೀಡುತ್ತಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ, ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶ ಎಂದು ಹೇಳಿಕೊಂಡಿದ್ದಾರೆ.
X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಹಾ ಕುಂಭದ ದೈವಿಕ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸುವ ಶುಭ ಅವಕಾಶ ಪಡೆದಿದ್ದೇವೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು. ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಹಾ ಕುಂಭಮೇಳದ ವಿಶೇಷತೆ ಸಾರುವ 52 ನಿಮಿಷಗಳ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.