ತುಮಕೂರಿನಲ್ಲಿ ಶೇಂಗಾ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಲಿ: ಎಂಎಲ್ಸಿ ಚಿದಾನಂದ್ ಗೌಡ ಒತ್ತಾಯ

ಹೊಸದಿಗಂತ ವರದಿ, ತುಮಕೂರು
ತುಮಕೂರಿನಲ್ಲಿ ಶೇಂಗಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ಒತ್ತಾಯಿಸಿದರು.
ಇಂದು ಮೇಲ್ಮನೆಯ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡರವರು ಬಯಲು ಸೀಮೆ ಪ್ರದೇಶದ ಪ್ರಮುಖ ಬೆಳೆಯಾದ ಶೇಂಗಾ ಬೆಳೆಯ ಕುರಿತು ಚರ್ಚಿಸಿದರು.
ಪ್ರತಿದಿನ ಒಂದಲ್ಲಾ ಒಂದು ವಿಷಯದ ಬಗ್ಗೆ ಅಧಿವೇಶವನದಲ್ಲಿ ಚರ್ಚಿಸುತ್ತಿರುವ ಚಿದಾನಂದ ಗೌಡ್ರು ಇಂದು ಬಯಲು ಸೀಮೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇಂಗಾ (ಕಡಲೆಕಾಯಿ) ಬೆಳೆಯು ಅತ್ಯಂತ ಪ್ರಮುಖ ಬೆಳೆಯಾಗಿದ್ದು, ಇಲ್ಲಿ ಅನೇಕ ರೈತರು ಶೇಂಗಾ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಬಯಲು ಸೀಮೆ ಪ್ರದೇಶದ ಶೇಂಗಾ ಬೆಳೆಗಾರರು ನಿರಂತರವಾಗಿ ನಷ್ಟ ಅನುಭವಿಸುತ್ತಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದರು.
ಕಳೆದ ಐದು ವರ್ಷಗಳಿಂದಲೂ ಸರಿಯಾದ ಸಮಯಕ್ಕೆ ಮಳೆ ಬಾರದ್ದರಿಂದ ಶೇಂಗಾ ಬೆಳೆ ಉತ್ಪಾದನೆ ಕನಿಷ್ಟ ಮಟ್ಟಕ್ಕೆ ಇಳಿದು, ರೈತರು ನಿರಂತರ ಸಮಸ್ಯೆ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ? ಇದಕ್ಕೆ ಸರ್ಕಾರ ರೈತರ ಹಿತ ದೃಷ್ಟಿಯಿಂದ ಏನು ಕ್ರಮ ಕೈಗೊಂಡಿದೆ. ಬೆಳೆ ವಿಮೆ ಕೂಡ ಸರಿಯಾಗಿ ತಲುಪುತ್ತಿಲ್ಲ, ಆದ್ದರಿಂದ ಸರ್ಕಾರ ಉತ್ತಮ ಯೋಜನೆ ರೂಪಿಸಿ ಬಯಲುಸೀಮೆಯಲ್ಲಿ ಶೇಂಗಾ ಪ್ರಮುಖ ಎಣ್ಣೆಕಾಳು ಬೆಳೆಯಾಗಿರುವುದರಿಂದ ಶೇಂಗಾ ಬೆಳೆಯನ್ನು ವೈಜ್ಞಾನಿಕ ವಿಧಾನಗಳಿಂದ ಬೆಳೆಗಾರರನ್ನು ಸದೃಢಗೊಳಿಸಿ, ಉತ್ತಮ ಬೆಂಬಲ ಬೆಲೆ ಒದಗಿಸಿ ನಮ್ಮ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವುದು ಹಾಗೂ ಶೇಂಗಾ ಅಭಿವೃಧ್ದಿ ಮಂಡಳಿ ಸ್ಥಾಪಿಸುವುದರ ಮೂಲಕ ಶೇಂಗಾ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವಂತೆ ಮಾನ್ಯ ಸಭಾಪತಿಗಳ ಮೂಲಕ ಸರ್ಕಾರದ ಕೃಷಿ ಸಚಿವರನ್ನು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!