ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಮುಖ ನಾಯಕ ನಟರ ಸಿನೆಮಾ ಸೇರಿದಂತೆ ಏಳು ಚಿತ್ರಗಳು ಈ ವಾರ ತೆರೆಕಾಣಲಿದೆ. ಆ ಮೂವಿಗಳು ಯಾವುದು ಅಂತ ನೀವು ತಿಳ್ಕೊಬೇಕಾದ್ರೆ ಈ ಸ್ಟೋರಿ ಓದಿ…
ಆಪಲ್ ಕಟ್
ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಪುತ್ರಿ ಸಿಂಧೂ ಗೌಡ ನಿರ್ದೇಶಿಸಿರುವ ಈ ಚಿತ್ರ ಮರ್ಡರ್ ಮಿಸ್ಟ್ರಿ ಕಥಾ ಹಂದರ ಹೊಂದಿದೆ.
ಮಿಥ್ಯ
ರಕ್ಷಿತ್ ಶೆಟ್ಟಿಯ ಪರಂವ: ಸ್ಟುಡಿಯೋ ಮೂಲಕ ನಿರ್ಮಿಸಿ, ಸುಮಂತ್ ಭಟ್ ನಿರ್ದೇಶಿಸಿರುವ ಚಿತ್ರ ಮಿಥ್ಯ. ಈ ಚಿತ್ರ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಜನ ಮೆಚ್ಚುಗೆ ಗಳಿಸಿದೆ. 11ನೇ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ಹುಡುಗನ ಸುತ್ತ ಸುತ್ತುವ ಈ ಚಿತ್ರದಲ್ಲಿ ಮಾಸ್ಟರ್ ಆತೀಶ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇಂಟರ್ ವಲ್
ಭರತ್ ನಿರ್ದೇಶನದ, ಶಶಿ ರಾಜ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡ ಇಂಟರ್ ವಲ್ ಚಿತ್ರ ಮೂರು ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತು ನಡೆಯುವ ಕಥಾ ಹಂದರವಾಗಿದೆ.
ಕಪಟಿ
ಡಿ ಪಿಕ್ಚರ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ರವಿಕಿರಣ್, ಚೇತನ್ ಎಸ್ಪಿ ನಿರ್ದೇಶಸಿರುವ ಕಪಟಿ ಚಲನಚಿತ್ರ ಅಪರೂಪದ ಡಾರ್ಕ್ ವೆಬ್ ಜಾನರ್ ಹೊಂದಿದೆ.
ಕನಸೊಂದು ಶುರುವಾಗಿದೆ
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ, ಲೂಸ್ ಮಾದ ಯೋಗಿ ಬೆಂಬಲ ನೀಡಿದ್ದಾರೆ.
ಇವುಗಳ ಜೊತೆಗೆ ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಅಭಿಮನ್ಯು ಕಾಶಿನಾಥ್ ಅಭಿನಯದ ಸೂರಿ ಲವ್ಸ್ ಸಂಧ್ಯಾ ಸೇರಿ ಒಟ್ಟು ಏಳು ಚಿತ್ರಗಳು ಈ ವಾರ ತೆರೆಗೆ ಬರಲಿವೆ.