ಪಶ್ಚಿಮ ಬಂಗಾಳದಲ್ಲಿ ಸಿಡಿಲ ಅಬ್ಬರಕ್ಕೆ ಏಳು ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಸಿಡಿಲಿಗೆ ಏಳು ಮಂದಿ ಮೃತಪಟ್ಟಿದ್ದಾರೆ.

Very heavy rains predicted to lash sub-Himalayan Bengal districts for next three days | India News,The Indian Expressಮಾಲ್ಡಾ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಕೃಷ್ಣ ಚೌಧರಿ, ದೆಬೋಶ್ರೀ, ನಜ್ರುಲ್, ರಾಬಿಜಾನ್ ಹಾಗೂ ಮಕ್ಕಳಾದ ಉಮ್ಮೆ ಕುಲ್ಸುಮ್, ಸೋಮಿತ್ ಮಂಡಲ್ ಹಾಗೂ ಇಸಾ ಸರ್ಕಾರ್ ಮೃತರು.

Heavy rains expected to hit West Bengal and NE states; IMD - New Delhi Times - India Only International Newspaperಮಾಲ್ಡಾದ ಬಂಗಿತೊಲಾ ಹೈಸ್ಕೂಲ್ ಬಳಿ ಸಿಡಿಲು ಬಡಿದು 12 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಎರಡು ವರ್ಷದ ಹಿಂದೆಯೂ ಸಿಡಿಲಿನ ಅಬ್ಬರಕ್ಕೆ ಪಶ್ಚಿಮ ಬಂಗಾಳ ತತ್ತರಿಸಿತ್ತು. ರಾಜಸ್ಥಾನ, ಉತ್ತರಪ್ರದೇಶ ಹಾಗೂ ಬಿಹಾರ ಸೇರಿದಂತೆ ವಿವಿಧೆಡೆ ಒಂದೇ ದಿನ 61 ಮಂದಿ ಮೃತಪಟ್ಟಿದ್ದರು.ಕಳೆದ ಎರಡು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!