ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
ಮೂಡಿಗೆರೆ ತಾಲೂಕಿನ ಜೋಗಣ್ಣಕೆರೆ ಗ್ರಾಮದ ಸೃಷ್ಟಿ ಮೃತ ವಿದ್ಯಾರ್ಥಿನಿ. ಸೃಷ್ಟಿ ಬೆಳಗ್ಗೆ ಶಾಲೆಗೆ ಹೋಗುವಾಗ ಏಕಾಏಕಿ ಬಿದ್ದಿದ್ದಾರೆ. ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ.
ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯ ಸೃಷ್ಟಿ ಮೃತಪಟ್ಟಿದ್ದಾರೆ. ವೈದ್ಯರು ಇದನ್ನು ದೃಢಪಡಿಸಿದ್ದಾರೆ.