ರಾಜ್ಯದಲ್ಲಿ ಸಿಕ್ಕಾಪಟ್ಟೆ ಚಳಿ ಹೆಚ್ಚಾಗಿದೆ. ಈ ಸಮಯದಲ್ಲಿ ಮಕ್ಕಳು ಹಾಗೂ ವೃದ್ಧರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಅವರ ಬಗ್ಗೆ ಹೆಚ್ಚು ಕಾಳಜಿ ಮಾಡುವ ಅವಶ್ಯಕತೆ ಇದೆ, ಏನೆಲ್ಲಾ ಮಾಡಬಹುದು?
ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಬೆಚ್ಚಗಿನ ಉಡುಪುಗಳನ್ನು ಹಾಕಿ. ಶಾಲೆಗೆ ಕಳುಹಿಸುವಾಗ ತಲೆಗೆ ಟೋಪಿ ಹಾಗೂ ಸ್ವೆಟರ್ ಕಡ್ಡಾಯವಾಗಿರಲಿ.
ಸಾಧ್ಯವಾದರೆ, ಬೆಚ್ಚಗಿರುವಾಗ ಅವರನ್ನು ಹೊರಗೆ ಆಟವಾಡಲು ಪ್ರೋತ್ಸಾಹಿಸಿ. ಇಲ್ಲದಿದ್ದರೆ, ಒಳಾಂಗಣದಲ್ಲಿ ಯೋಗ, ನೃತ್ಯ ಅಥವಾ ಸ್ಟ್ರೆಚಿಂಗ್‌ನಂತಹ ವ್ಯಾಯಾಮಗಳನ್ನು ಮಾಡಿಸಬಹುದು. ಆರೋಗ್ಯ ಕಾಪಾಡಲು ದೈಹಿಕ ಚಟುವಟಿಕೆ ಮುಖ್ಯ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಿ. ಹೆಚ್ಚೆಚ್ಚು ತರಕಾರಿ, ಹಣ್ಣು ಹಾಗೂ ಪ್ರೋಟೀನ್‌ಭರಿತ ಆಹಾರ ನೀಡಿ.
ಅತಿಯಾದ ಚಳಿಯ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಲು ವೈದ್ಯರ ಸಲಹೆ ಪಡೆಯಿರಿ. ಅವರು ನೀಡುವ ಸಲಹೆಗಳನ್ನು ಪಾಲಿಸಿ.

