ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಜೀರಿಯಾದ ನೈಜರ್ ರಾಜ್ಯದ ಮಾರುಕಟ್ಟೆ ಪಟ್ಟಣವಾದ ಮೊಕ್ವಾದಲ್ಲಿ ಪ್ರವಾಹ ಸಂಭವಿಸಿ 117 ಮಂದಿ ಮೃತಪಟ್ಟಿದ್ದಾರೆ.
ಮೊಕ್ವಾ ಪಟ್ಟಣ ದೇಶದ ಉತ್ತರ-ದಕ್ಷಿಣ ವ್ಯಾಪಾರ ಕೊಂಡಿಯಾಗಿದ್ದು, ಡ್ಯಾಂ ಒಡೆದು ಹೋಗಿದ್ದ ಪರಿಣಾಮ ಪಟ್ಟಣದೊಳಗೆ ನೀರು ನುಗ್ಗಿ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಜರ್ ರಾಜ್ಯದ ರಾಜಧಾನಿ ಮಿನ್ನಾದಲ್ಲಿನ ಕಾರ್ಯಾಚರಣೆ ಕಚೇರಿಯ ಮುಖ್ಯಸ್ಥ ಹುಸೇನಿ ಇಸಾಹ್, ಶುಕ್ರವಾರ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ.