ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಶೀಲವಂತ ಕೆರೆಗೆ ಕೊಳಚೆ ನೀರು ಮಿಕ್ಸ್ ಆಗಿದ್ದು, ನೂರಾರು ಮೀನುಗಳು ಮೃತಪಟ್ಟಿವೆ.
ವೈಟ್‌ಫೀಲ್ಡ್‌ನಲ್ಲಿರುವ ಶೀಲವಂತ ಕೆರೆಗೆ ಕೊಳಚೆ ನೀರು ನುಗ್ಗಿದ್ದು, ಸಾವಿರಾರು ಮೀನುಗಳು ಒದ್ದಾಡಿ ಪ್ರಾಣಬಿಟ್ಟಿವೆ. ಕಳೆದ ವಾರ ಸುರಿದ ಮಳೆಗೆ ನಲ್ಲೂರಹಳ್ಳಿ ಕಡೆಯಿಂದ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವುದೇ ಮೀನುಗಳ ಸಾವಿಗೆ ಕಾರಣ ಎಂದು ನಿವಾಸಿಗಳು ಹಾಗೂ ಸ್ಥಳೀಯರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆರೆಗಳ ವಿಭಾಗದ ಅಧಿಕಾರಿಗಳು, ಕಲುಷಿತ ಕೆರಯಲ್ಲಿ ಆಮ್ಲಜನಕ ಮಟ್ಟವು ಕಡಿಮೆಯಾಗುವುದರಿಂದ ಮೀನುಗಳು ಸಾಯುತ್ತವೆ ಎಂದು ಹೇಳಿದ್ದಾರೆ. ಸತ್ತ ಮೀನುಗಳನ್ನು ತೆರವುಗೊಳಿಸಲು, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮತ್ತು ಕೆಸರು ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.