October 9, 2026
Friday, October 9, 2026
spot_img

ಗೋಕರ್ಣ ಮಹಾಬಲೇಶ್ವರ ಗರ್ಭಗುಡಿಗೆ ಕೊಳಚೆ ನೀರು; ಭಕ್ತರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಣ್ಣ ನೀರಾವರಿ ಇಲಾಖೆಗೆ ತುರ್ತು ಸೂಚನೆ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಆತ್ಮಲಿಂಗವಿರುವ ಗರ್ಭಗುಡಿಯಲ್ಲಿ ಕೊಳಚೆ ನೀರು ನಿಂತು ಭಕ್ತರ ಭಾವನೆಗೆ ಧಕ್ಕೆಯಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗೇಟ್ ವಾಲ್ವ್ ಅಳವಡಿಕೆ:

ದೇವಾಲಯದ ಸೋಮಸೂತ್ರದ ಮೂಲಕ ಮಳೆಗಾಲದಲ್ಲಿ ಹಿಮ್ಮುಖವಾಗಿ ನುಗ್ಗುವ ಕಲುಷಿತ ನೀರನ್ನು ತಡೆಯಲು, ಸಂಗಮ ನಾಲೆಗೆ ಸೇರುವ ಜಾಗದಲ್ಲಿ ಅತ್ಯಾಧುನಿಕ ‘ಗೇಟ್ ವಾಲ್ವ್’ ಅಳವಡಿಸಲು ಸಿಎಂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:

ತ್ವರಿತ ಕ್ರಮಕ್ಕೆ ಸೂಚನೆ:

‘ಪರಿವರ್ತನ ಗೋಕರ್ಣ’ ಸಂಸ್ಥೆಯ ಮನವಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ಸಿಎಂ ಡಿಕೆಶಿ, ವಿಷಯದ ಗಂಭೀರತೆ ಪರಿಗಣಿಸಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಆದೇಶಿಸಿದ್ದಾರೆ. ಸ್ಥಳೀಯ ಸಂಸ್ಥೆಯ ಒಳಚರಂಡಿ ವೈಫಲ್ಯದಿಂದಾಗಿ ಐತಿಹಾಸಿಕ ಕ್ಷೇತ್ರಕ್ಕೆ ಉಂಟಾಗಿದ್ದ ಸಮಸ್ಯೆಗೆ, ಸಿಎಂ ನೇರ ಮಧ್ಯಪ್ರವೇಶದಿಂದಾಗಿ ಶೀಘ್ರವೇ ಪರಿಹಾರ ಸಿಗುವ ಭರವಸೆ ಮೂಡಿದೆ.

Must Read