ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಗೆ ಇಂದು ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ ಸಂತ್ರಸ್ತರ ಜೊತೆ ಮಾತನಾಡಿ, ಶೀಘ್ರವೇ ಕೇಂದ್ರದಿಂದ ಪರಿಹಾರದ ಪ್ಯಾಕೇಜ್ ನೀಡುವ ಭರವಸೆ ನೀಡಿದರು.
ಆಪರೇಷನ್ ಸಿಂದೂರ ಬಳಿಕ ಇದೇ ಮೊದಲ ಬಾರಿಗೆ ಪೂಂಚ್ಗೆ ಭೇಟಿ ನೀಡಿದ ಶಾ, ಶೆಲ್ ದಾಳಿಯಲ್ಲಿ ಮನೆಗಳು, ಉದ್ಯಮ ಮತ್ತು ಧಾರ್ಮಿಕ ಸ್ಥಳಗಳು ಧ್ವಂಸಗೊಂಡಿದ್ದು, ಈ ಹಾನಿಗೆ ಕೇಂದ್ರದಿಂದ ಪರಿಹಾರ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಎರಡು ದಿನಗಳ ಪ್ರವಾಸದಲ್ಲಿರುವ ಶಾ ಅವರ ಜೊತೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ದೆಹಲಿ ಸಚಿವ ಮಜಿಂದರ್ ಸಿಂಗ್ ಸರ್ಸಾ ಇದ್ದರು.
ಪೂಂಚ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಖಂಡನಾರ್ಹ ಶೆಲ್ ದಾಳಿ ನಡೆಸಿದೆ. ಈ ಕೃತ್ಯದಿಂದ ವಿಶೇಷವಾಗಿ ಪೂಂಚ್ ಜನರು ಹಾನಿಗೊಂಡಿದ್ದಾರೆ. ಭಾರತ ನಾಗರಿಕರನ್ನು ಉದ್ದೇಶಿಸಿ ದಾಳಿ ಮಾಡದೇ ಕೇವಲ ಭಯೋತ್ಪಾದಕರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿತ್ತು ಎಂದರು.