CINE | ಶಾರುಖ್‌ ಫ್ಯಾನ್ಸ್‌ ಇನ್ನೂ ಕಾಯ್ಬೇಕು.. ಹೊಸ ಸಿನಿಮಾ ರಿಲೀಸ್‌ ಆಗೋಕೆ ಎರಡು ವರ್ಷ ಬೇಕಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟು ಬಾಲಿವುಡ್‌ನಲ್ಲಿ ಕಿಂಗ್‌ ಎಂದರೆ ಶಾರುಖ್‌ ಅಷ್ಟೇ ಎಂದು ಹೆಸರುಮಾಡಿದ್ದ ಶಾರುಖ್‌ ಖಾನ್‌ ಮುಂದಿನ ಸಿನಿಮಾ ರಿಲೀಸ್‌ಗೆ ತುಂಬಾ ಸಮಯ ಕಾಯ್ಬೇಕಿದ್ದು, ಫ್ಯಾನ್ಸ್‌ಗೆ ನಿರಾಸೆಯಾಗಿದೆ.

ಶಾರುಖ್ ಖಾನ್ ಅವರ ಮುಂದಿನ ಸಿನಿಮಾ ಇನ್ನು ರಿಲೀಸ್ ಆಗೋದು 2026ರಲ್ಲಿ ಎಂದು ವರದಿ ಆಗಿದೆ. ಶಾರುಖ್ ಖಾನ್ ಅವರು ಮಗಳು ಸುಹಾನಾ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದು, ಇದಕ್ಕೆ ‘ಕಿಂಗ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಭಿಷೇಕ್ ಬಚ್ಚನ್ ಅವುರ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜನವರಿ 2025ರಲ್ಲಿ ಆರಂಭ ಆಗಲಿದೆ. ಸಿನಿಮಾ ರಿಲೀಸ್ ಆಗೋದು 2026ರಲ್ಲಿ ಎಂದು ವರದಿ ಆಗಿದೆ.

ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರದ ಶೂಟಿಂಗ್ ಯುರೋಪ್​ನಲ್ಲಿ ನಡೆಯಲಿದೆ. ಅಲ್ಲಿನ ಜನವರಿ ವಾತಾವರಣದಲ್ಲೇ ಶೂಟ್ ಮಾಡುವ ಅಗತ್ಯತೆ ಇದೆ. ಈ ಕಾರಣದಿಂದಲೇ ನಿರ್ದೇಶಕ ಸುಜಯ್ ಘೋಷ್ ಅವರು ಜನವರಿಯಲ್ಲಿ ಸಿನಿಮಾ ಶೂಟ್ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!