ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್‌ಗೆ ಹುಟ್ಟುಹಬ್ಬದ ಸಂಭ್ರಮ. 58ನೇ ವರ್ಷಕ್ಕೆ ಕಾಲಿಟ್ಟಿರುವ ಶಾರೂಖ್‌ಗೆ ಅಭಿಮಾನಿಗಳು ಹಾಗೂ ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇನ್ನು ನಿನ್ನೆ ತಡರಾತ್ರಿಯೇ ಅಭಿಮಾನಿಗಳು ಮುಂಬೈನಲ್ಲಿರುವ ಶಾರೂಖ್ ಮನೆ ʻಮನ್ನತ್ʼ ಬಳಿ ಜಮಾಯಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು. ಎಸ್‌ಆರ್‌ಕೆ ಪೋಸ್ಟರ್ ಹಿಡಿದು ನೆಚ್ಚಿನ ನಟನಿಗೆ ಮನದುಂಬಿ ಹರಸಿದರು.
ಅಭಿಮಾನಿಗಳನ್ನು ನಿರಾಸೆಗೊಳಿಸದ ಶಾರೂಖ್ ಬಾಲ್ಕನಿ ಬಳಿ ಬಂದು ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ತಿಳಿಸಿದರು. ನಟನ ಮನೆಮುಂದೆ ನೋಡಿದಷ್ಟೂ ಜನಸ್ತೋಮ, ಪೊಲೀಸ್ ಭದ್ರತೆ ಕೂಡ ಇತ್ತು. ಎಲ್ಲರ ಕೈಯಲ್ಲಿ ಮೊಬೈಲ್ ಟಾರ್ಚ್‌ಗಳಿಂದ ಬೆಳಕಿನ ಹಬ್ಬ ನಿರ್ಮಾಣವಾಗಿತ್ತು. ಸದ್ಯ ಈ ಸಂಬಂಧ ಕೆಲ ವಿಡಿಯೋಗಳು ವೈರಲ್ ಆಗಿವೆ ನೀವೂ ನೋಡಿ..
No PR can afford this and No Star can pull this. #ShahRukhKhan’s Stardom will be a dream for the biggest of the biggest. Mid-Night Crowd!!
This is SHAHDOM!!#HappyBirthdaySRK
— JUST A FAN. (@iamsrk_brk) November 1, 2023