BOLLYWOOD| ಸೆಲ್ಫಿ ಕೇಳಿದ ಅಭಿಮಾನಿ ವಿರುದ್ಧ ಶಾರೂಖ್‌ ದುರಹಂಕಾರ ವರ್ತನೆ ವೈರಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿಯನ್ನು ಶಾರುಖ್ ಖಾನ್ ದೂರ ತಳ್ಳಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ನಿರ್ಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಸೆಲೆಬ್ರೆಟಿ ಅಂದ ಮೇಲೆ ಅವರನ್ನು ಕಂಡೊಡನೆ ಫೋಟೊ ತೆಗದುಕೊಳ್ಳಬೇಕೆಂದು ಪ್ರತಿಯೊಬ್ಬ ಅಭಿಮಾನಿ ಮನಸಲ್ಲೂ ಇರುತ್ತದೆ. ಹೀಗೆ ಮುಂದೆ ಬಂದ ಅಭಿಮಾನಿ ಜೊತೆಗ ಶಾರೂಕ್‌ ನಡೆಯನ್ನು ಪಾಪರಾಜಿಗಳ ಶೂಟ್‌ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಈಗಷ್ಟೇ ಪಠಾಣ್‌ ಹಿಟ್‌ ಮೂಡ್‌ನಲ್ಲಿರುವ ಶಾರೂಕ್‌ ಪ್ರಸ್ತುತ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಭಿಮಾನಿಯನ್ನು ದೂರ ತಳ್ಳಿದ್ದಲ್ಲದೆ, ಒಂದು ಕ್ಷಣ ಹಿಂದೆ ತಿರುಗಿ ಸಿಟ್ಟಿನಿಂದ ನೋಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಪರ/ವಿರೋಧ ಕಮೆಂಟ್‌ ಮಾಡುತ್ತಿದ್ದಾರೆ.

ನೆಲೆಬ್ರೆಟಿಗಳು ಹೀಗೆ ನಡೆದುಕೊಳ್ಳುವುದು ಹೊಸದೇನಲ್ಲ. ಕೆಲವೊಮ್ಮೆ ಯಾವುದೋ ಅವಸರದಲ್ಲರುವಾಗ ಹೀಗೆ ತೊಂದರೆ ಕೊಟ್ಟರೆ ಕೋಪಮಾಡಿಕೊಳ್ಳುವುದುಂಟು, ಈ ಹಿಂದೆ ಅನೇಕ ನಟ/ನಟಿಯರು ಕೂಡ ಇಂತಹ ವಿಚಾರಗಳನ್ನು ಶೇರ್‌ ಮಾಡಿಕೊಂಡಿದ್ದರು. ಇದೀಗ ಶಾರೂಖ್‌ ಖಾನ್‌ ಸರದಿ.

https://www.instagram.com/reel/CrxAG8XpTQL/?utm_source=ig_web_copy_link

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here