ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕ ಭೀಕರವಾಗಿ ಕೊಂದಿದ್ದಾನೆ. ಹಿಂದು ಯುವತಿಯರು ಮುಸ್ಲಿಂ ಯುವಕರ ಸ್ನೇಹ ನಿರಾಕರಿಸಿದ್ದಕ್ಕೆ ಭೀಕರವಾಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಿಲ್ಲುತ್ತಿಲ್ಲ.
21 ವರ್ಷದ ಹಿಂದು ಯುವತಿ ಮಾತನಾಡಿಸಿಲ್ಲ ಎಂಬ ಕಾರಣಕ್ಕೆ ಕುಪಿತನಾದ ಶಹಬಾಜ್ ಖಾನ್ 51 ಬಾರಿ ಸ್ಕ್ರೂ ಡ್ರೈವರ್‌ನಿಂದ ಇರಿದು ಆಕೆಯನ್ನು ಕೊಂದಿದ್ದಾನೆ.
ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಶಹಬಾಜ್ ಬಸ್‌ನಲ್ಲಿ ದಿನವೂ ತೆರಳುತ್ತಿದ್ದ ಹಿಂದು ಯುವತಿ ಜತೆ ಸ್ನೇಹ ಬೆಳೆಸಿದ್ದಾನೆ. ಯುವತಿ ಶಹಬಾಜ್‌ಗೆ ನಂಬರ್ ನೀಡಿದ್ದಳು. ಕೆಲ ತಿಂಗಳು ಇಬ್ಬರು ಸ್ನೇಹಿತರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಯುವತಿ ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಳು.
ಈ ಕಾರಣಕ್ಕೆ ಆತ ಯುವತಿ ಪೋಷಕರಿಗೂ ಬೆದರಿಕೆ ಹಾಕಿದ್ದ. ಯುವತಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಶಹಬಾಜ್ ಬಂದಿದ್ದು, ಸ್ಕ್ರೂ ಡ್ರೈವರ್‌ನಲ್ಲಿ 51 ಬಾರಿ ಆಕೆಗೆ ಇರಿದಿದ್ದಾರೆ. ಒಂದು ಬಾರಿಗೆ ಆಕೆ ಕಿರುಚಲು ಆರಂಭಿಸಿದ್ದು, ಯಾರಿಗೂ ತಿಳಿಯಬಾರದೆಂದು ಬಾಯಿಗೆ ದಿಂಬನ್ನು ಮುಚ್ಚಿದ್ದಾನೆ. ಕೊಲೆ ಮಾಡಿ ಶಹಬಾಜ್ ಪರಾರಿಯಾಗಿದ್ದಾನೆ.
ಯುವತಿ ಸಹೋದರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಕಂಡು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾರೆ.