ಶಾಹಿ ಜಾಮಾ ಮಸೀದಿ “ವಿವಾದಿತ ಸ್ಥಳ”: ಅಲಹಾಬಾದ್ ಹೈಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಸಂಭಾಲ್ ನಲ್ಲಿರುವ ಶಾಹಿ ಜಾಮಾ ಮಸೀದಿ “ವಿವಾದಿತ ಸ್ಥಳ” ಎಂದು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

ಹಿಂದು ಅರ್ಜಿದಾರರ ಕೋರಿಕೆಯ ಮೇರೆಗೆ, ಶಾಹಿ ಮಸೀದಿಗೆ ವಿವಾದಿತ ಕಟ್ಟಡ ಎಂಬ ಪದವನ್ನು ಬಳಸುವಂತೆ ನ್ಯಾಯಾಲಯವು ಸ್ಟೆನೋಗ್ರಾಫರ್‌ಗೆ ಸೂಚನೆ ನೀಡಿದೆ.

ಭಾರತೀಯ ಪುರಾತತ್ವ ಇಲಾಖೆ(ASI)ಯ ಸುಣ್ಣ ಬಳಿಯುವ ಅಗತ್ಯವಿಲ್ಲ ಎಂದು ಹೇಳುವ ವರದಿಯನ್ನು ವಿರೋಧಿಸಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಸೂಚನೆ ನೀಡಿದೆ.

ಮೊಘಲ್ ದೊರೆ ಬಾಬರ್ 1526 ರಲ್ಲಿ ಹಿಂದು ದೇವಾಲಯ ಹರಿಹರ ಮಂದಿರವನ್ನು ಕೆಡವಿ, ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಆ ಕುರಿತ ಸಮೀಕ್ಷೆ ನಡೆಸಿ ಅದರ ವರದಿ ಸಲ್ಲಿಸುವಂತೆ ಎಎಸ್ಐಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!