ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ‘ಕೊಲೆ ಯತ್ನ’ದ ಆರೋಪ ದಾಖಲಿಸಿದ ಶಹನವಾಜ್ ರಂಝಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮಾರ್ಚ್‌ ನಲ್ಲಿ ಪ್ರಧಾನಿ ಸ್ಥಾನದಿಂದ ಪದಚ್ಯುತ ಗೊಂಡಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿರುತ್ತಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಪಿಎಂಎಲ್-ಎನ್ ನಾಯಕ ಮೊಹ್ಸಿನ್ ಶಹನವಾಜ್ ರಂಝಾ ಅವರು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮಾನ್‌ ಖಾನ್‌ ವಿರುದ್ಧ ʼಕೊಲೆಯತ್ನʼದ ಪ್ರಕರಣ ದಾಖಲಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಸೆಕ್ರೆಟರಿಯೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಧಾನಿಯಲ್ಲಿರುವ ಪಾಕಿಸ್ತಾನದ ಚುನಾವಣಾ ಆಯೋಗದ ಕಚೇರಿಯ ಹೊರಗೆ ರಂಝಾ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆಯು ಮುನ್ನೆಲೆಗೆ ಬಂದಿದೆ. ತೋಷಖಾನಾ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅವರನ್ನು ದೋಷಿಯಾಗಿಸಿ ಪಾಕಿಸ್ತಾನದ ಚುನಾವಣಾ ಆಯೋಗವು ಅನರ್ಹಗೊಳಿಸಿದ್ದು ಇನ್ನು ಮುಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ ಎಂದು ತೀರ್ಪುನೀಡಿದೆ.
ತೀರ್ಪಿನ ನಂತರ, ಪಿಟಿಐ ಕಾರ್ಯಕರ್ತರು ಬೀದಿಗಿಳಿದು ಈ ಕ್ರಮವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪ್ರತಿಭಟನೆಯ ವೇಲೆ ರಾಂಝಾ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಎಫ್‌ಐಆರ್‌ನಲ್ಲಿ ಖಾನ್‌ಗೆ ಕೊಲೆಯ ಆರೋಪ ಹೊರಿಸಲಾದ ಅಪರಾಧಕ್ಕೆ ಸಹಾಯ ಮತ್ತು ಪ್ರಚೋದನೆ ನೀಡಿದ ಆರೋಪವಿದೆ. ಎಫ್‌ಐಆರ್‌ನಲ್ಲಿ ಇತರ ಐದು ಆರೋಪಗಳೊಂದಿಗೆ ಅವರನ್ನು ಹೆಸರಿಸಲಾಗಿದೆ ಎಂದು ವರದಿಯೊಂದು ಸೂಚಿಸುತ್ತದೆ. ತಾನು ಇಸಿಪಿ ಕಚೇರಿಯಿಂದ ಹೊರಬಂದ ತಕ್ಷಣ ತನ್ನ ಮೇಲೆ ದಾಳಿ ನಡೆಸಲಾಯಿತು ಮತ್ತು ‘ಕೊಲೆ’ ಉದ್ದೇಶದಿಂದ ಮತ್ತು ‘ಪಿಟಿಐ ನಾಯಕತ್ವದ ಆದೇಶ’ದ ಮೇರೆಗೆ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ರಂಝಾ ಹೇಳಿದ್ದಾರೆ. ಅವರ ಕಾರನ್ನು ಧ್ವಂಸಗೊಳಿಸಲಾಯಿತು ಮತ್ತು ಖಾನ್ ಬೆಂಬಲಿಗರು ಗಾಜು ಒಡೆದು ಹಾಕಲು ಪ್ರಯತ್ನಿಸಿದರು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!