ಹೊಸದಿಗಂತ ಡಿಜಿಟಲ್ ಡೆಸ್ಕ್:
26 ವರ್ಷಗಳ ಹಿಂದೆ ಮಣಿರತ್ಮಂ ಹಾಗೂ ಶಾರುಖ್ ಖಾನ್ ಕಾಂಬಿನೇಷನ್‌ನಲ್ಲಿ ದಿಲ್ ಸೇ ಸಿನಿಮಾ ಹೊರಬಂದಿತ್ತು.
ಹಿಟ್ ಸಿನಿಮಾದ ನಂತರ ಈ ಕಾಂಬಿನೇಷನ್‌ನಲ್ಲಿ ಮತ್ಯಾವ ಸಿನಿಮಾ ಕೂಡ ಮೂಡಿಬಂದಿರಲಿಲ್ಲ. ಫ್ಯಾನ್ಸ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಇಟ್ಟಿದ್ದರು.
ಇದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ. ಕಾರ್ಯಕ್ರಮವೊಂದರಲ್ಲಿ ಶಾರುಖ್ ಹಾಗೂ ಮಣಿರತ್ನಂ ಸ್ಟೇಜ್ ಶೇರ್ ಮಾಡಿದ್ದರು. ಈ ವೇಳೆ ಶಾರುಖ್, ಸರ್ ನನಗಾಗಿ ಒಂದು ಸಿನಿಮಾ ಮಾಡಿ, ನಿಮಗಾಗಿ ಈ ಬಾರಿ ಟ್ರೈನ್ ಅಲ್ಲ, ವಿಮಾನದ ಮೇಲೆ ನಿಂತು ಚಯ್ಯಾ ಚಯ್ಯಾ ಡ್ಯಾನ್ಸ್ ಮಾಡ್ತೀನಿ ಎಂದು ಶಾರುಖ್ ತಮಾಷೆಯಾಗಿ ಹೇಳಿದ್ದಾರೆ. ಅದಕ್ಕೆ ಮಣಿರತ್ನಂ ನಾನು ವಿಮಾನ ಖರೀದಿ ಮಾಡಿದ ಮೇಲೆ ಶಾರುಖ್ ಜೊತೆ ಸಿನಿಮಾ ಮಾಡ್ತೀನಿ ಎಂದು ತಮಾಷೆಯಾಗಿ ಹೇಳಿದ್ದಾರೆ. ಅದಕ್ಕೆ ಶಾರುಖ್ ಸರ್ ನಾನೇ ಸಿನಿಮಾ ಕೊಡಿಸ್ತೀನಿ ಎಂದು ಹೇಳಿದ್ದಾರೆ.
ಇದೆಲ್ಲ ತಮಾಷೆಯಾದರೂ ಇವರ ಕಾಂಬಿನೇಷನ್ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿರುವುದು ಮಾತ್ರ ತಮಾಷೆಯಲ್ಲ.