ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ.
ನಾರಿಯರಿಗಾಗಿ ಇರುವ ಯೋಜನೆ ಇದಾಗಿದ್ದು, ತಮ್ಮ ತಮ್ಮ ಊರುಗಳಿಂದ ಮೈಸೂರಿಗೆ ಮಹಿಳೆಯರು ಫ್ರೀ ಬಸ್ ಹತ್ತಿ ಬಂದಿದ್ದಾರೆ. ಮೈಸೂರಿನಿಂದ ಮಹಾರಾಜ ಕಾಲೇಜು ಬಳಿ ಬರಲು ಸರ್ಕಾರ ಸಾಕಷ್ಟು ಬಸ್ ವ್ಯವಸ್ಥೆ ಮಾಡಿದೆ.
ನೂರಾರು ಗೃಹಲಕ್ಷ್ಮಿಯರು ಕಾರ್ಯಕ್ರಮಕ್ಕೆ ಈಗಾಗಲೇ ಆಗಮಿಸಿದ್ದಾರೆ. ಕೈ ನಾಯಕರಾದ ಖರ್ಗೆ, ರಾಹುಲ್ ಗಾಂಧಿ ಬಟನ್ ಒತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.