ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಸಂಸದ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದರು.
ಆನಂದಪುರದ ಬೆಕ್ಕಿನಕಲ್ಮಠ ಮುರುಘರಾಜೇಂದ್ರ ಮಹಾಸಂಸ್ಥಾನದ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಗುರುಬಸವ ಮಹಾಸ್ವಾಮಿಗಳವರ 112ನೇ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ ನೀಡಿದ ಗುರುಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿದರು.
ನಂತರ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಕ್ಷೇತ್ರದ ಅಭಿವೃದ್ಧಿಯನ್ನು ಪರಿಗಣಿಸಿ ಉತ್ತಮ ಸಲಹೆಗಾರರನ್ನು ಆಯ್ಕೆ ಮಾಡಿದ್ದೀರಿ. ರಾಘವೇಂದ್ರ ಅವರಂತಹ ಸಂಸದರನ್ನು ಪಡೆದ ನೀವು ಅದೃಷ್ಟವಂತರು. ಅವರು ಮಾಡಲಾಗದ್ದನ್ನು ಮಾಡಿದರು. ಈ ಬಾರಿ ಬಿಜೆಪಿಯಿಂದ ಖಂಡಿತಾ ಟಿಕೆಟ್ ಸಿಗಬಹುದು. ಶಿವಶಂಕರಪ್ಪ ಮಾತನಾಡಿ, ವೀರಶೈವ ಲಿಂಗಾಯತದಲ್ಲಿ ಹಲವು ಉಪಶಾಖೆಗಳಿದ್ದು, ಎಲ್ಲರೂ ಒಂದೇ ಎಂಬ ಭಾವನೆ ಮೂಡಿದಾಗ ಏಕತೆ ಮೂಡುತ್ತದೆ ಎಂದರು.
ಶಾಮನೂರು ಅವರ ವಿಡಿಯೋ ತುಣುಕನ್ನು ರಾಘವೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ಮುತ್ಸದ್ಧಿ ನಾಯಕರಾಗಿ ಹಾಗೂ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ನನ್ನ ರಾಜಕೀಯ ಜೀವನದಲ್ಲಿ ಈ ದಿನ ಅತ್ಯಂತ ಮಂಗಳಕರ ದಿನವಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮಾತಾಡಿರುವುದರಿಂದ ನನಗೆ ನೂರಾನೆ ಬಲ ಬಂದಂತಾಗಿದೆ. ಮುಂಬರುವ ಅವಧಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಶ್ರಮವಹಿಸಿ ಮಹನೀಯರು ನನಗೆ ನೀಡಿದ ಭರವಸೆಯನ್ನು ಈಡೇರಿಸಲು ಸಂಕಲ್ಪ ಮಾಡಿದ್ದೇನೆ ಎಂದರು.