ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಚಲುವರಾಯಸ್ವಾಮಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನುವ ಪತ್ರವೊಂದು ಎಲ್ಲೆಡೆ ವೈರಲ್ ಆಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಇದು ನಕಲಿ ಪತ್ರ ಎಂದು ಹೇಳಿದ್ದಾರೆ. ಇದರ ಬಗೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದು, ಮಂತ್ರಿಗಳ ಮಾನಗೇಡಿ ಕೆಲಸಗಳನ್ನು ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ಬಂದು ವಕ್ಕರಿಸಿದ್ದಾರೆ.
ಸಚಿವರ ಸುಲಿಗೆಯನ್ನೂ ಸಿಗ್ಗಿಲ್ಲದೇ ಸಮರ್ಥನೆ ಮಾಡಿಕೊಳ್ತಾರೆ. ಇವರಿಗೆ ಇದೆಲ್ಲಾ ಸಿದ್ಧಕಲೆಯಾಗಿದೆ, ಇದು ವಾಕರಿಕೆ ಮತ್ತು ಅಸಹ್ಯ ತರಿಸುವಂಥದ್ದಾಗಿದೆ ಎಂದು ಹೇಳಿದ್ದಾರೆ.