ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ದರೆ ನಮಗೆ ಅವಮಾನ: ವಾಟಾಳ್​ ನಾಗರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ಬಸ್ ಪ್ರಯಾಣದಿಂದ ಹೆಂಗಸರು ಯಾರ ಮಾತನ್ನು ಕೇಳುತ್ತಿಲ್ಲ. ಆದ್ರೆ ನಾನು ಅವರ ಪ್ರಯಾಣ ವಿರೋಧ ಮಾಡುತ್ತಿಲ್ಲ. ಆದರೆ ಸರ್ಕಾರ ಗಂಡಸರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ (Vatal Nagaraj) ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ದರೆ ನಮಗೆ ಅವಮಾನ ಆಗುತ್ತದೆ. ಮುಂದಿನ ವಾರ ಬಿಎಂಟಿಸಿ ಬಸ್​ ಹತ್ತಿ ಎಲ್ಲರ ಪರವಾಗಿ ಕೇಳುತ್ತೇನೆ ಎಂದು ಹೇಳಿದರು.

ಎಲ್ಲರಿಗೂ ಉಚಿತ ಕೊಡಿ, ಇದೊಂದು ಪ್ರಳಯ ಆಗಲಿ. ಗಂಡಸರ ಉಚಿತ ಪ್ರಯಾಣ ಬಗ್ಗೆಯೂ ಬಜೆಟ್​ನಲ್ಲಿ ಘೋಷಿಸಿ. ಗಂಡಸರು ವೋಟ್ ಹಾಕಿಲ್ವಾ, ಅವರಿಗೆ ಉಚಿತ ಪ್ರಯಾಣ ಕೊಡಿ ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!