ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ತಂಗಿ ಕುಟುಂಬದ ಮೇಲೆ ನರೇಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವಾಗಿ ವೇತನ ಪಡೆದ ಆರೋಪ ಕೇಳಿಬಂದಿದೆ. ಈ ಕುರಿತು ದಾಖಲೆಗಳು ಕೂಡ ಹೊರಬಿದ್ದಿದೆ.
ಶಮಿ ಸಹೋದರಿ ಶಾಬಿನಾ ಮತ್ತು ಆಕೆಯ ಪತಿ ಹಾಗೂ ಅತ್ತೆ ಉತ್ತರ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಕೆಲಸ ಮಾಡಿದಂತೆ ತೋರಿಸಿ ಹಣ ಪಡೆದಿದ್ದಾರೆ ಎಂದು ವರದಿಯಾಗಿದೆ.
2021-2024ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಮಿ ತಂಗಿ ಹಾಗೂ ಆಕೆಯ ಪತಿ ಇಬ್ಬರ ಖಾತೆಗೂ ವೇತನದ ಹಣ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆರೋಪದ ಕುರಿತು ಶಮಿ ಅಥವಾ ಶಮಿ ತಂಗಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.