ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ ಮಂದಿಗೆ ಪ್ರೀತಿ, ಪ್ರೇಮ ಪ್ರಣಯ, ಬ್ರೇಕಪ್ ವಿಚಾರಗಳು ಕಾಮನ್. ಸೆಲೆಬ್ರಿಟಿಗಳ ಹೊಸ ಕಥೆಗಳು ಪ್ರತಿದಿನ ಹೊರಬೀಳುತ್ತಿರುತ್ತವೆ. ಜೊತೆಗಿದ್ದಾಗ ಪ್ರಣಯ ಪಕ್ಷಿಗಳಂತೆ ಸುತ್ತಾಡಿ ಸುದ್ದಿಯಾಗುವ ಬಣ್ಣದ ಲೋಕದ ಮಂದಿಯ ಬ್ರೇಕಪ್ ಗಳು ಅಷ್ಟೇ ದೊಡ್ಡಮಟ್ಟದಲ್ಲಿ ಹಲ್‌ಚಲ್ ಎಬ್ಬಿಸುತ್ತವೆ. ಬಾಲಿವುಡ್ ಅಂಗಳದಲ್ಲಿ ಪ್ರೀತಿ, ಪ್ರೇಮ ಎಂದೆಲ್ಲಾ ಸುತ್ತಾಡುತ್ತಿದ್ದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸಹ ಇದೀಗ ತಮ್ಮ ಬ್ರೇಕಪ್ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ.
‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಮಿತಾ ಶೆಟ್ಟಿಗೆ ನಟ ರಾಕೇಶ್ ಬಾಪಟ್ ಅವರೊಂದಿಗೆ ಸ್ನೇಹ ಗಾಢವಾಗಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಬಿಗ್ ಬಾಸ್ OTT ಕಾರ್ಯಕ್ರಮ ಮುಗಿದ ನಂತರವೂ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರೆಸಿದರು. ಅನೇಕ ಸಂದರ್ಭಗಳಲ್ಲಿ ಈ ಪ್ರೇಮ ಪಕ್ಷಿಗಳು ಒಟ್ಟಿಗೆ ಕಾಣಿಸಿಕೊಂಡರು. ಆದರೆ ಈಗ ಬೇರೆ ಸುದ್ದಿಯೊಂದು ಕೇಳಿ ಬಂದಿದೆ. ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಶಮಿತಾ ಶೆಟ್ಟಿ ಆಗಲಿ ಅಥವಾ ರಾಕೇಶ್ ಬಾಪಟ್ ಅಧಿಕೃತವಾಗಿ ಹೇಳಿಕೊಳ್ಳುವುದು ಬಾಕಿ ಇದೆ.
ಶಮಿತಾ ಶೆಟ್ಟಿ ರಾಕೇಶ್ ಬಾಪಟ್ ಅವರನ್ನು ಮದುವೆಯಾಗುತ್ತಾರೆ ಎಂದು ಊಹಿಸಿದ್ದ ಅಭಿಮಾನಿಗಳಿಗೆ ಈಗ ಬ್ರೇಕಪ್ ಸುದ್ದಿ ಬೇಸರ ತರಿಸಿದೆ.
ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಬೇರ್ಪಡಲಿದ್ದಾರೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದುವರೆಗೂ ಅವರ ಕುಟುಂಬದವರಾಗಲೀ, ಸ್ನೇಹಿತರಾಗಲೀ ಈ ಬಗ್ಗೆ ಮೌನ ಮುರಿದಿಲ್ಲ. ಈ ಜೋಡಿಯು ಕೆಲವು ತಿಂಗಳುಗಳಿಂದ ಬೇರೆಯಾಗಿದೆ ಎಂದು ವರದಿಗಳು ಕೇಳಿಬಂದಿದೆ. ಆದರೆ ಈ ಸಂಬಂಧದಲ್ಲಿ ಒಂದು ಟ್ವಿಸ್ಟ್ ಇದೆ. ಪ್ರೀತಿ ಅಂತ್ಯವಾದರೂ ಸ್ನೇಹಿತರಾಗಿ ಮುಂದುವರಿಯಲು ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಿರ್ಧರಿಸಿದ್ದಾರೆ ಎನ್ನಲಾಗಿದೆ!
ಆರಂಭದ ದಿನಗಳಿಂದಲೂ ಶಮಿತಾ ಮತ್ತು ರಾಕೇಶ್ ಬಾಪಟ್ ತಮ್ಮ ಖಾಸಗಿ ಜೀವನದ ವಿವರಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ಬ್ರೇಕಪ್ ವಿಚಾರವನ್ನು ಮರೆಮಾಚಿದ್ದಾರೆ. ಬಾಲಿವುಡ್‌ನಲ್ಲಿ ಕೆಲವು ಚಿತ್ರಗಳನ್ನು ಮಾಡಿದರೂ, ಶಮಿತಾ ಶೆಟ್ಟಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. 43ನೇ ವಯಸ್ಸಿನಲ್ಲೂ ಅವರು ಅವಿವಾಹಿತೆಯಾಗಿಯೆ ಉಳಿದುಕೊಂಡಿದ್ದಾರೆ. ರಾಕೇಶ್ ಬಾಪಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಈಗ ಬ್ರೇಕಪ್ ಸುದ್ದಿ ಅಭಿಮಾನಿಗಳಿಗೆ ಬೇಸರ ತಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ