ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಭೆಗಳನ್ನು ನೀವು ನೋಡಿರುತ್ತೀರಿ, ಆದರೆ ಎಲ್ಲರೂ ಕ್ಲಿಕ್ ಆಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ ಹಾಡಿಗೆ ಪಿಯಾನೋ ನುಡಿಸಿ ಮನೆಮಾತಾಗಿದ್ದ ಮಗು ಇದೀಗ ಮ್ಯೂಸಿಕ್ ಲೆಜೆಂಡ್ ಶಂಕರ್ ಮಹದೇವನ್ ಅವರ ಕಣ್ಣಿಗೂ ಬಿದ್ದಿದೆ.
ಹುಟ್ಟುತ್ತಲೇ ಟೀಚರ್ ಆಗಿ ಇರುವವರನ್ನು ಎಂದಾದರೂ ನೋಡಿದ್ದೀರಾ? ನೋಡಿಲ್ಲ ಎಂದರೆ ಈಗ ನೋಡಿ ಈ ಪುಟಾಣಿ ಬಾರ್ನ್ ಟೀಚರ್. ದೇವರ ಬಳಿ ಖುದ್ದು ಆಶೀರ್ವಾದ ಪಡೆದುಕೊಂಡು ಬಂದಿದ್ದಾಳೆ. ಯಾರೀ ಮಗು? ಈ ಪುಟಾಣಿಯನ್ನು ಒಂದು ಬಾರಿ ಭೇಟಿ ಆಗೋ ಆಸೆ, ಒಮ್ಮೆ ಆಕೆಗೆ ಹಗ್ ನೀಡುವಾಸೆ, ಸಾಕಷ್ಟು ಆಶೀರ್ವಾದ ಕೊಡುವಾಸೆ. ಎಷ್ಟೊಂದು ಸ್ಪಷ್ಟವಾಗಿ ಸ್ವರಸಂಗತಿಗಳನ್ನು ಹೇಳ್ತಿದ್ದಾಳೆ ಎಂದು ಶಂಕರ್ ಮಹದೇವನ್ ಪೋಸ್ಟ್ ಮಾಡಿದ್ದಾರೆ.
ಈ ಬಾಲಕಿ ಹೆಸರು ಶಾಲ್ಮಲಿ, ಶಂಕರ್ ಮಹದೇವನ್ ಅವರ ಪೋಸ್ಟ್‌ನ್ನು ಗಮನಿಸಿದ ಪೋಷಕರು ಉತ್ತರ ನೀಡಿದ್ದು, ನಿಮ್ಮ ಪದಗಳಿಂದ ಮೂಕವಿಸ್ಮಿತರಾಗಿದ್ದೇವೆ, ನಮ್ಮ ಮಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು, ನಿಮ್ಮನ್ನು ಭೇಟಿಯಾಗಲು ಉತ್ಸುಕರಾಗಿದ್ದೇವೆ ಸರ್ ಎಂದು ಹೇಳಿದ್ದಾರೆ.
https://www.instagram.com/reel/CvZImc_o4-C/?utm_source=ig_web_copy_link&igshid=MzRlODBiNWFlZA==