ಹೊಸದಿಗಂತ ವರದಿ ,ಮಂಗಳೂರು:
ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಹಾಗೂ ಹಿಂದು ಸಂಘಟನೆ ಮುಖಂಡ ಭರತ್ ಕುಮ್ಡೇಲು ಅವರಿಗೆ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಲಾಗಿದೆ.
ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಆಂಟಿ ಕಮ್ಯೂನಲ್ ಫೋರ್ಸ್ ರಚನೆ ಹಾಗೂ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಕ್ರಮ ಮಾತುಗಳನ್ನಾಡಿದ ಬಳಿಕವೂ ಜೀವ ಬೆದರಿಕೆ ಹಾಕುವ ಘಟನೆ ಮುಂದುವರೆದಿದೆ.
ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್.. ಶರಣ್ ಹತ್ಯೆಯಾಗಲು ತಯಾರಾಗು’ ಎಂದು ಬೆದರಿಕೆ ಹಾಕಲಾಗಿದ್ದು, ಬಜರಂಗದಳ ಮುಖಂಡ ಭರತ್ ಕುಮ್ಡೆಲ್ಗೂ ಇದೇ ರೀತಿ ಬೆದರಿಕೆಯ ಪೋಸ್ಟ್ ಹಾಕಲಾಗಿದೆ.
ಭರತ್ ಕುಮ್ಡೆಲ್ ಬಗ್ಗೆ ಜಾಲತಾಣದಲ್ಲಿ ‘ನೆಕ್ಸ್ಟ್ ಟಾರ್ಗೆಟ್ ಭರತ್ ಕುಮ್ಡೆಲ್.. ಇಂಷಾ ಅಲ್ಲಾ’ ಎಂದು ಪೋಸ್ಟ್ ಮಾಡಲಾಗಿದೆ.
೨೦೧೭ ಜೂನ್ ೨೧ರಂದು ಹತ್ಯೆಯಾಗಿದ್ದ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಆರೋಪ ಭರತ್ ಕುಮ್ಡೇಲ್ ಮೇಲಿದೆ. ಸಝಿನ್ ಹಾಗೂ ಸಜೊವ್ ಕಾಂಟ್ ಹೆಸರಿನ ಖಾತೆಗಳಿಂದ ಈ ಪೋಸ್ಟ್ ಮಾಡಲಾಗಿದೆ.
೨೦೧೮ ರ ಜನವರಿಯಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬಳಿಕ ಬಶೀರ್ ಕೊಲೆ ಘಟನೆ ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ ನಡೆದಿತ್ತು. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜು ಈ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ‘ಶ್ರೀಜು ನೆಕ್ಸ್ಟ್ ಟಾರ್ಗೆಟ್’ ಎಂದು ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು.
Killers_target ಹೆಸರಿನ ಪೇಜ್ನಿಂದ ಪೋಸ್ಟ್ ಆಗಿತ್ತು. ಭಾನುವಾರ ಮತ್ತೆ ಕಿಡಿಗೇಡಿಗಳು ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದಾರೆ.Abu_Sifiyan678 ಪೇಜ್ನಿಂದ ಬೆದರಿಕೆ ಹಾಕಲಾಗಿದ್ದು, ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಎಂದು ಮಲಯಾಳಂನಲ್ಲಿ ಮೆಸೇಜ್ ಮಾಡಲಾಗಿದೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ಜಾಲತಾಣಗಳಲ್ಲಿ ರಿವೆಂಜ್ ಪೋಸ್ಟ್ಗಳ ಅಟ್ಟಹಾಸ ಮಿತಿ ಮೀರುತ್ತಿದೆ.