ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಎಂಬ ಯುವಕನ ಮೃತದೇಹ ಪತ್ತೆಯಾಗಿದೆ.
ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯಿಂದಾಗಿ ಒಂದು ವಾರದ ಬಳಿಕ ಶರತ್ ಮೃತದೇಹ ಇಂದು (ಜುಲೈ 30) ಸಿಕ್ಕಿದೆ.
ಜುಲೈ 23ರಂದು ಕೊಲ್ಲೂರಿಗೆ ಬಂದಿದ್ದ ಶರತ್, ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ದುರಂತ ಸಂಭವಿಸಿತ್ತು. ಈ ವಿಡಿಯೋ ಎಲ್ಲೆ ವೈರಲ್ ಕೂಡ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಳೆ ಇದ್ದಿದ್ದರಿಂದ ಎಷ್ಟೇ ಕಾರ್ಯಚರಣೆ ನಡೆಸಿದ್ದರೂ ಶರತ್ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸತತ ಕಾರ್ಯಚರಣೆಯಿಂದ 200 ಮೀಟರ್ ಕೆಳಗಡೆ ಬಂಡೆಗಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡಿದ್ದ ಶರತ್ ಮೃತದೇಹ ಪತ್ತೆಯಾಗಿದ್ದು, ಇದೀಗ ಮೃತದೇಹವನ್ನು ಹೊರತರಲಾಗಿದೆ.