Friday, January 23, 2026
Friday, January 23, 2026
spot_img

ಗಿಲ್ಲಿಗೆ ಚಿನ್ನದ ಚೈನ್ ಗಿಫ್ಟ್ ಕೊಟ್ಟ ಶರವಣ? ಏನಿದರ ಅಸಲಿಯತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನಸಖತ್ ಬ್ಯುಸಿ ಆಗಿದ್ದಾರೆ . ಬಿಗ್ ಬಾಸ್​ನಿಂದ ಗೆಲುವು ಒಂದು ಕಡೆಯಾದರೆ, ಅವರಿಗೆ ಸಿಕ್ಕ ಜನಪ್ರಿಯತೆ ಮತ್ತೊಂದು ಕಡೆ. ಇದರ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ, ಷೋರೂಮ್​ಗಳ ಉದ್ಘಾಟಕರಾಗಿ ಗಿಲ್ಲಿನಟನಿಗೆ ಆಹ್ವಾನದ ಮೇಲೆ ಆಹ್ವಾನ ಬರುತ್ತಿದೆ .

ಚಿನ್ನಾಭರಣ ಉದ್ಯಮಿ ಶರವಣ ಅವರು, ಬಿಗ್​ಬಾಸ್​ನಲ್ಲಿ ಗಿಲ್ಲಿನಟನಿಗೆ 20 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಇದೀಗ ಅವರು ತಮ್ಮ ಚಿನ್ನದ ಮಳಿಗೆಯೊಂದರ ಉದ್ಘಾಟನೆಗೆ ಗಿಲ್ಲಿನಟ ಅವರನ್ನು ಕರೆದಿದ್ದಾರೆ.

ಈ ಸಂದರ್ಭದಲ್ಲಿ ಅವರು ಗಿಲ್ಲಿನಟನಿಗೆ ಭರ್ಜರಿ ಚಿನ್ನದ ಸರವನ್ನು ತೊಡಿಸಿದ್ದಾರೆ. ಗಿಲ್ಲಿ ನಟ ಇದನ್ನು ನೋಡಿ ಸುಸ್ತಾದಂತೆ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಗಿಲ್ಲಿನಟನ ಕಿವಿಯಲ್ಲಿ ಶರವಣ ಅವರು ಏನೋ ಕಿವಿಮಾತು ಹೇಳಿದ್ದಾರೆ. ಆ ಚಿನ್ನದ ಸರವನ್ನು ಉದ್ಘಾಟನೆಯ ಸಮಯದಲ್ಲಿ ತೊಡಿಸಿದ್ದು, ಸಾಮಾನ್ಯವಾಗಿ ಅದನ್ನು ಉದ್ಘಾಟನೆ ಬಳಿಕ ಅವರು ಹಿಂದಿರುಗಿಸಬೇಕಾಗುತ್ತದೆ. ಇದನ್ನೇ ಕಿವಿಯಲ್ಲಿ ಹೇಳಿರಬಹುದು!ಒಟ್ಟಿನಲ್ಲಿ ಗಿಲ್ಲಿಯ ಹವಾ ಮುಂದುವರೆದಿದೆ.

Must Read