April 19, 2026
Sunday, April 19, 2026
spot_img

ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಆಗಿದೆ? ಇದರಿಂದ ಆಗೋ ಉಪಯೋಗ ಏನು?

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹದಿನಾರು ವರ್ಷದ ಮಕ್ಕಳಿಗೆ ಸೋಶಿಯಲ್‌ ಮೀಡಿಯಾ ಬ್ಯಾನ್‌ ಮಾಡಿದ್ದಾರೆ. ಅಫೀಶಿಯಲ್‌ ಆಗಿ ಸಾಮಾಜಿಕ ಜಾಲತಾಣ ಬ್ಯಾನ್‌ ಆಗಿದೆ. ಆದರೆ ಮಕ್ಕಳು ನಿಜವಾಗಿಯೂ ನೋಡೋದು ನಿಲ್ಲಿಸ್ತಾರಾ ಗೊತ್ತಿಲ್ಲ. ಪೋಷಕರ ಫೋನ್‌ನಿಂದ, ಫೇಕ್‌ ಡೇಟ್‌ ಆಫ್‌ ಬರ್ತ್‌ ನೀಡಿ ಬಳಸುವ ಸಾಧ್ಯತೆ ಇದೆ. ಆದರೆ ಪೋಷಕರು ಅಲರ್ಟ್‌ ಆಗಿರಬೇಕು ಅಷ್ಟೆ.

ಹಿಂದೆಲ್ಲ ಮಕ್ಕಳಿಗೆ ಒತ್ತಡ ಅಂದ್ರೆ ಗೊತ್ತಿರಲಿಲ್ಲ, ಟ್ರೆಂಡ್‌ ಫಾಲೋ ಮಾಡಬೇಕಿರಲಿಲ್ಲ, ಪುಸ್ತಕ ಓದುವ ಬದಲು ರೀಲ್ಸ್‌ ಮಾಡುವ ಕೆಲಸ ಮಾಡಬೇಕಿರಲಿಲ್ಲ. ಈಗಿನ ಮಕ್ಕಳಿಗೆ ಶಾಲೆಗೆ ಮುನ್ನ ಗೆಟ್‌ ರೆಡಿ ವಿತ್‌ ಮಿ ವಿಡಿಯೋ ಮಾಡಬೇಕು ಅನ್ನೋ ಸ್ಟ್ರೆಸ್‌, ಉದ್ದಲಂಗದ ಡಿಸೈನ್‌ ಹುಡುಕೋಕೂ ಸಾಮಾಜಿಕ ಜಾಲತಾಣವೇ ಬೇಕು. ಇದಿಷ್ಟೇ ಸಿಕ್ಕರೆ ಪರವಾಗಿಲ್ಲ ಎನ್ನಬಹುದು, ಆದರೆ ಸಾಮಾಜಿಕ ಜಾಲತಾಣದಲ್ಲಿ ಅಡಲ್ಟ್‌ ಕಂಟೆಂಟ್‌ ಕೂಡ ಇದೆ. ಇದನ್ನು ಮಕ್ಕಳಿಂದ ಹೇಗೆ ದೂರ ಇಡ್ತೀರಿ? ಸಿದ್ದರಾಮಯ್ಯ ಸೋಶಿಯಲ್‌ ಮೀಡಿಯಾ ಬ್ಯಾನ್‌ ಮಾಡಿ ಪುಣ್ಯ ಕಟ್ಟುಕೊಂಡಿದ್ದಾರೆ ಅಂತಿದ್ದಾರೆ ಪೋಷಕರು!

ಯಾಕೆ ಬೇಡ ಸೋಶಿಯಲ್‌ ಮೀಡಿಯಾ?

ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮಕ್ಕಳಿಗೆ ಡಿಪ್ರೆಷನ್‌, ಒತ್ತಡ, ಸೆಲ್ಫ್‌ ಕಾನ್ಫಿಡೆನ್ಸ್‌ ಇಲ್ಲದಿರುವ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಮೆದುಳಿನ ಬೆಳವಣಿಗೆಗೆ ಇದು ಹಾನಿಕಾರಕ. ಬೇಗ ಮಕ್ಕಳು ಸೋಶಿಯಲ್‌ ಮೀಡಿಯಾಗೆ ಅಡಿಕ್ಟ್‌ ಆಗ್ತಾರೆ.

ಮಕ್ಕಳಿಗೆ ಸಾಮಾಜಿಕ ಜಾಲತಾಣದಲ್ಲಿ ಯಾರಾದ್ರೂ ಯಾಮಾರಿಸಬಹುದು.

ಸೋಮಾರಿಯಾಗುತ್ತಾರೆ, ದೈಹಿಕ ಚಟುವಟಿಕೆ ಇಲ್ಲದೆ ಆರೋಗ್ಯ ಹಾಳಾಗುತ್ತದೆ. ನಿದ್ದೆ ಕಡಿಮೆಯಾದರೆ ರೋಗ ತಪ್ಪಿದ್ದಲ್ಲ.

ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮಕ್ಕಳಿಗೆ ಬಾಡಿ ಕಾನ್ಶಿಯಸ್‌ನೆಸ್‌ ಬರುತ್ತದೆ. ನಾನಿನ್ನೂ ಸಣ್ಣ ಇರಬೇಕಿತ್ತು, ದಪ್ಪ ಇರಬೇಕಿತ್ತು, ಬೆಳ್ಳಗಿರಬೇಕಿತ್ತು, ಈ ಆಟಸಾಮಾನು ಬೇಕಿತ್ತು, ಅವಳ ಬಳಿ ಇರುವ ಮೇಕಪ್‌ ಕಿಟ್‌ ಬೇಕಿತ್ತು ಹೀಗೆ ಲಿಸ್ಟ್‌ ದೊಡ್ಡದಾಗುತ್ತದೆ.

ಸೋಶಿಯಲ್‌ ಆಗೋದನ್ನೇ ಮರೆಯುತ್ತಾರೆ, ಮದುವೆ ಮನೆಗಳಲ್ಲಿ, ಗ್ಯಾದರಿಂಗ್ಸ್‌ನಲ್ಲಿ ಅಷ್ಟೇ ಯಾಕೆ ಮನೆಯಲ್ಲಿ ಫೋನ್‌ ಮುಂದೆ ಕುಳಿತರೆ ಜಗತ್ತೇ ಬೇಡವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !