Sunday, December 7, 2025

ಪುಟಿನ್‌ ಔತಣಕೂಟದಲ್ಲಿ ಶಶಿ ತರೂರ್‌ ಹಾಜರಿ: ಕಾಂಗ್ರೆಸ್‌ನಲ್ಲಿ ಅಸಮಾಧಾನದ ಅಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟ ಇದೀಗ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೌರವಾರ್ಥವಾಗಿ ಆಯೋಜಿಸಿದ್ದ ಅಧಿಕೃತ ಭೋಜನ ಸಭೆಯಲ್ಲಿ ತಿರುವನಂತಪುರಂ ಸಂಸದ ಶಶಿ ತರೂರ್ ಹಾಜರಾಗಿರುವುದು, ಚರ್ಚೆಯ ಕೇಂದ್ರಬಿಂದುವಾಗಿದೆ. ಸಾಮಾನ್ಯ ರಾಜತಾಂತ್ರಿಕ ಕಾರ್ಯಕ್ರಮವೆಂದು ಕಾಣಿಸಿಕೊಂಡ ಈ ಹಾಜರಿ, ರಾಜಕೀಯವಾಗಿ ವಿಭಿನ್ನ ಅರ್ಥ ಪಡೆಯುತ್ತಿದೆ.

ವಿಶೇಷವೆಂದರೆ, ಇದೇ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತರೂರ್ ಮಾತ್ರ ಭಾಗವಹಿಸಿರುವುದು ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ. ಕಾಂಗ್ರೆಸ್ ವಕ್ತಾರರು ಈ ನಡೆಯನ್ನು ಪಕ್ಷದ ನಿಲುವಿಗೆ ವಿರುದ್ಧ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಕೆಲ ನಾಯಕರು ಇದರ ಹಿಂದೆ ರಾಜಕೀಯ ಸಂದೇಶ ಅಡಗಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲ ಗದ್ದಲಗಳ ನಡುವೆ ಪ್ರತಿಕ್ರಿಯಿಸಿದ ಶಶಿ ತರೂರ್, ತಾನು ಕಾಂಗ್ರೆಸ್ ಸಂಸದನಾಗಿಯೇ ಮುಂದುವರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಕ್ಷ ತೊರೆಯುವ ಯಾವುದೇ ನಿರ್ಧಾರ ಇಲ್ಲ ಎಂದು ಹೇಳಿರುವ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಜನಪ್ರತಿನಿಧಿಯಾಗಿ ತನ್ನ ಕರ್ತವ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

error: Content is protected !!