March 12, 2026
Thursday, March 12, 2026
spot_img

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಒಡೆತನದ ವಾಷಿಂಗ್ಟನ್‌ ಪೋಸ್ಟ್‌, ಇತ್ತೀಚಿಗೆ ಸಂಸ್ಥೆಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದೆ.

ಸ್ಥಳೀಯ ವರದಿಗಾರರು, ಕ್ರೀಡಾ ವಿಭಾಗ, ವಿದೇಶಿ ಬ್ಯುರೋಗಳು ಮತ್ತು ವ್ಯಾಪಾರ ವಿಭಾಗದ ಅನೇಕ ಪತ್ರಕರ್ತರನ್ನು ವಾಷಿಂಗ್ಟನ್ ಪೋಸ್ಟ್‌ ಕೆಲಸದಿಂದ ವಜಾಗೊಳಿಸಿದೆ. ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಹಿರಿಯ ಅಂತಾರಾಷ್ಟ್ರೀಯ ವ್ಯವಹಾರಗಳ ಅಂಕಣಕಾರರಾಗಿದ್ದ ಶಶಿ ತರೂರ್‌ ಅವರ ಪುತ್ರ ಇಶಾನ್‌ ತರೂರ್‌ ಅವರನ್ನು, ಪತ್ರಿಕೆಯ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.

ವಾಷಿಂಗ್ಟನ್‌ ಪೋಸ್ಟ್‌ನ ಈ ನಿರ್ಧಾರವನ್ನು ಅನೇಕ ಮಾಜಿ ಸಿಬ್ಬಂದಿಗಳು “ಜಾಗತಿಕ ಪತ್ರಿಕೋದ್ಯಮಕ್ಕೆ ಕರಾಳ ದಿನ” ಎಂದು ಬಣ್ಣಿಸಿದ್ದಾರೆ. ಪ್ರತಿಷ್ಠಿತ ದಿನಪತ್ರಿಕೆಯೊಂದು ಈ ರೀತಿ ಏಕಾಏಕಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪೋಸ್ಟ್‌ ಮಾಡಿರುವ ಶಶಿ ತರೂರ್‌ ಪುತ್ರ ಇಶಾನ್‌ ತರೂರ್‌ ನನ್ನ ಹೃದಯ ಒಡೆದುಹೋಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !