ದೇಶದ ರಕ್ಷಣೆಗಾಗಿ ಶೌರ್ಯ ಜಾಗರಣ ಯಾತ್ರೆ: ಆರೆಸ್ಸೆಸ್ ನ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಭಾರತ ಹಿಂದೂ ದೇಶವಾಗಿರಲು ಸಾವಿರಾರೂ ಹೋರಾಟಗಾರರು ತ್ಯಾಗ ಬಲಿದಾನ ಮಾಡಿದ್ದು, ಅವರನ್ನು ಸ್ಮರಿಸುವ ಮೂಲಕ ಆಧುನಿಕ ಭಾರತ ರಕ್ಷಣೆ ನಾವೆಲ್ಲರೂ ಮುಂದಾಗಬೇಕು ಎಂಬ ಉದ್ದೇಶದಿಂದ ಶೌರ್ಯ ಜಾಗರಣ ಯಾತ್ರೆ ಮಾಡಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.

ಶನಿವಾರ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಧಾರವಾಡ ವಿಭಾಗ ವತಿಯಿಂದ ಏರ್ಪಡಿಸಿದ್ದ ಶೌರ್ಯ ಜಾಗರಣ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಗೋ ಹತ್ಯೆ, ಮತಾಂತರ, ಲವ್ ಜಿಹಾದ್‌ನಂತಹ ಅನೇಕ ಕೃತ್ಯಗಳ ತಡೆದು ಹಿಂದೂ ರಾಷ್ಟ್ರ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಇಂತಹ ಕೃತ್ಯಗಳ ನಡೆಯಲು ವಿರೋಗಳು ಕಾರಣಿಭೂತರಾಗಿದ್ದಾರೂ ಅದಕ್ಕೆ ಅರಿವಿಲ್ಲದೇ ನಾವು ಅಷ್ಟೇ ಕಾರಣವಾಗಿದ್ದೇವೆ. ಇದು ಜಾಗೃತಿಯಿಂದ ಅಂತ್ಯ ಕಾಣಬೇಕಿದೆ ಎಂದರು.

ದೇಶದ ಇತಿಹಾಸ ನೋಡಿದಾಗ ಎಲ್ಲ ನಾಗರಿಕತೆಗಳನ್ನು ಇಸ್ಲಾಂ ದವರು ವಶಪಡಿಸಿಕೊಂಡಿದ್ದಾರೆ. ಆದರೆ ಸಿಂಧೂ ನಾಗರಿಕತೆ ಮಾತ್ರ ಅವರಿಗೆ ವಶಪಡಿಸಿಕೊಳ್ಳಲಾಗಿಲ್ಲ. ಕಾರಣ ಹಿಂದೂಗಳ ಶೌರ್ಯ ಪರಂಪರೆ ಇದಕ್ಕೆ ಮೂಲ ಕಾರಣ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!