ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ತಾವು ‘ಟ್ರಾನ್ಸ್ಮ್ಯಾನ್’ ಎಂದು ಘೋಷಿಸಿಕೊಂಡಿದ್ದು, ಶೀಘ್ರದಲ್ಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಎಸ್ಆರ್ಎಸ್) ಒಳಗಾಗುವುದಾಗಿ ಹೇಳಿದ್ದಾರೆ.
ಎಲ್ ಜಿಬಿಟಿಕ್ಯೂ ಸಮುದಾಯದ ಜನರ ಜೀವನೋಪಾಯದ ಕುರಿತು ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಸುಚೇತನಾ, ನಾನು ಪುರುಷನಾಗಿ ಗುರುತಿಸಿಕೊಂಡಿದ್ದೇನೆ ಮತ್ತು ದೈಹಿಕವಾಗಿಯೂ ಪುರುಷನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
LGBTQ ಕಾರ್ಯಕರ್ತ ಸುಪ್ರವಾ ರಾಯ್ ಅವರ ಸಾಮಾಜಿಕ ಮಾಧ್ಯದಲ್ಲಿ ಈ ಕುರಿತು ಪೋಸ್ಟ್ ಹಾಕಿದಬಳಿಕ ಈ ವಿಚಾರಮೊದಲು ಬಹಿರಂಗವಾಗಿದೆ.
ವಿಚಾರ ಸಂಕಿರಣದಲ್ಲಿ ಸುಚೇತನಾ ಅವರು ತಾನು ‘ಟ್ರಾನ್ಸ್ಮ್ಯಾನ್’ ಎಂದು ಘೋಷಿಸಿಕೊಂಡಿದ್ದರು ಮತ್ತು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ‘ಅವರು ಸುಚೇತನ್’ ಎಂದು ಕರೆಯಲ್ಪಡುವುದಾಗಿ ಹೇಳಿದ್ದರು.
ತಾವು 41 ವರ್ಷದ ವ್ಯಕ್ತಿಯಾಗಿದ್ದು, ಇದು ನನ್ನ ಸ್ವಂತ ನಿರ್ಧಾರವಾಗಿದ್ದು, ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ದಯವಿಟ್ಟು ನನ್ನ ಕುಟುಂಬವನ್ನು ಎಳೆಯಬೇಡಿ. ಇದು ನನ್ನ ವೈಯಕ್ತಿಕ ನಿರ್ಧಾರ. ಶಸ್ತ್ರಚಿಕಿತ್ಸೆಗೆ ಹೋಗುವ ಮುನ್ನ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸುಚೇತನಾ ಖಚಿತಪಡಿಸಿದ್ದಾರೆ.