ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟರ್ ಪೃಥ್ವಿ ಶಾ ಅವರು ತಮ್ಮ ಗೆಳತಿ ಆಕೃತಿ ಅಗರ್ವಾಲ್ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.ತಮ್ಮ ಗೆಳತಿ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪೋಟೋಗಳಿಗೆ ಪೃಥ್ವಿ ಶಾ ಅವರು ಭಾವನಾತ್ಮಕ ಕ್ಯಾಪ್ಷನ್ ನೀಡಿದ್ದಾರೆ. “ಮೈದಾನದಲ್ಲಿ ಸಿಕ್ಸ್‌ಗಳು ಹೊಡೆಯುವುದರಿಂದ ಆರಂಭಿಸಿ, ಅದರ ಹೊರಗೂ ಜೀವನಪೂರ್ತಿ ಹಿಟ್‌ಗಳನ್ನು ಸಾಧಿಸುವವರೆಗೆ. ಅವಳು ನನ್ನ ಪರಿಪೂರ್ಣ ಇನಿಂಗ್ಸ್! ” ಎಂದು ಬರೆದುಕೊಂಡಿದ್ದಾರೆ. ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ. ಟೀಮ್ ಇಂಡಿಯಾ ಕ್ರಿಕೆಟಿಗರು, ಅಭಿಮನಿಗಳು ಸೇರಿದಂತೆ ಸಾವಿರಾರು ಮಂದಿ ಕಾಮೆಂಟ್ ಮಾಡಿ ಶುಭಕೋರಿದ್ದಾರೆ.



