ಆರ್​ಬಿಸಿ ಗೆಲುವಿಗಾಗಿ ದಾಂಪತ್ಯವನ್ನೇ ಪಣಕ್ಕಿಟ್ಟಳು: ಸೋತರೇ ಪತಿಗೆ ಡಿವೋರ್ಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ ಕಿಂಗ್ಸ್‌ ವಿರುದ್ಧಕ್ವಾಲಿಫೈಯರ್‌-1 ಪಂದ್ಯದಲ್ಲಿ ಗೆದ್ದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಇದರ ಬೆನ್ನಲ್ಲೇ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ಖುಷಿಯಲ್ಲಿ ಕುಣಿದಾಡುತ್ತಾ, ಜಿಗಿಯುತ್ತಲಿದ್ದಾರೆ. ಇದಾಗಲೇ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಾರಣೆ ಮಾಡುತ್ತಿರುವ ಬೆನ್ನಲ್ಲೇ ಮಹಿಳೆಯೊಬ್ಬಳ ಪೋಸ್ಟರ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.

ಆಕೆ, ಆರ್​ಸಿಬಿ ಫೈನಲ್​ನಲ್ಲಿ ಗೆದ್ದು ಕಪ್​ ತರದೇ ಹೋದರೆ ತಾವು ಪತಿಗೆ ಡಿವೋರ್ಸ್​ ನೀಡುವುದಾಗಿ ಹೇಳಿಕೊಂಡಿದ್ದಾರೆ! ಇದರ ಅರ್ಥ RCB ಗೆಲ್ಲಿಸ್ತೀರೋ, ನಾನು ಡಿವೋರ್ಸ್​ ಕೊಡಲೊ ಎಂದು ಮಹಿಳೆ ಸಾರಿದ್ದಾರೆ.

ಇವರು ಯಾರು ಎನ್ನುವ ಬಗ್ಗೆ ತಿಳಿದಿಲ್ಲ. ಆದರೆ ಈ ಪೋಸ್ಟರ್​ ಮೂಲಕ ರಾತ್ರೋರಾತ್ರಿ ಫೇಮಸ್​ ಆಗಿದ್ದಾರೆ. ಪ್ರಚಾರಕ್ಕಾಗಿ ಏನೇನೋ ಮಾಡುವವರು ಇದ್ದಾರೆ. ಜೀವವನ್ನೇ ಲೆಕ್ಕಿಸದೇ ರೀಲ್ಸ್​ ಮಾಡುವವರೂ ಇದ್ದಾರೆ. ಆದರೆ ಹೀಗೆ ಆರ್​ಸಿಬಿಗೂ ತಮ್ಮ ದಾಂಪತ್ಯಕ್ಕೂ ಸಂಬಂಧ ಕಲ್ಪಿಸಿ ಈ ಮಹಿಳೆ ಹೀಗೆ ಬರೆದುಕೊಂಡಿರುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆಯೂ ಅಭಿಮಾನಿಯೊಬ್ಬರು ನಾನು, ಆರ್‌ಸಿಬಿ ಕಪ್‌ ಗೆಲ್ಲುವವರೆಗೆ ಮದುವೆಯಾಗೋದಿಲ್ಲ ಅಂತ ಪೋಸ್ಟರ್‌ ಹಿಡಿದುಕೊಂಡಿದ್ದರು. ಇದಕ್ಕೂ ಮುನ್ನ 2022 ಐಪಿಎಲ್‌ ಟೂರ್ನಿ ವೇಳೆಯೂ ಮಹಿಳಾ ಅಭಿಮಾನಿಯೊಬ್ಬರು ಆರ್‌ಸಿಬಿ ಕಪ್‌ ಗೆಲ್ಲೋವರೆಗೆ ನಾನು ಮದುವೆಯಾಗಲ್ಲ ಅಂತ ಪೋಸ್ಟರ್‌ ಹಿಡುಕೊಂಡಿದ್ದರು. ಆಗ ಇದು ಭಾರೀ ಟ್ರೆಂಡ್‌ ಕ್ರೆಯೆಟ್‌ ಮಾಡಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಖಂಡಿತ ಆಕೆಯ ಸವಾಲು ಸಮ್ಮತವೇ.ವಿಷಮ ದಾಂಪತ್ಯವಾಗಿದ್ದರೆ ಡೈವೋರ್ಸ್ ಖಾಯಂ.ಸಮರಸ ದಾಂಪತ್ಯವಾಗಿದ್ದರೆ ಒಮ್ಮೆ ಡೈವೋರ್ಸ್.ನಂತರ ಪರಸ್ಪರ ಒಪ್ಪಿಗೆಯೊಂದಿಗೆ ಮರು ಮದುವೆ.
    ಮಕ್ಕಳಿದ್ದರೆ ಅವರೂ ಸಾಕ್ಷೀಕರಿಸಬಹುದು.

    ಅಂತೂ ಅಭಿಮಾನವೇನೋ ಸರಿ. ಅತಿರೇಕ ಹುಚ್ಚಾಟ ಆಗಕೂಡದು.

LEAVE A REPLY

Please enter your comment!
Please enter your name here

error: Content is protected !!