ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಮಹಿಳಾ ಪ್ಯಾರಾ ಆರ್ಚರಿಪಟು ಪ್ರಶಸ್ತಿಗೆ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ 16 ವರ್ಷದ ಶೀತಲ್ ದೇವಿ ಆಯ್ಕೆಯಾಗಿದ್ದಾರೆ.
ಶನಿವಾರ ವಿಶ್ವ ಆರ್ಚರಿ ಸಂಸ್ಥೆ ವಿಜೇತರ ಪಟ್ಟಿ ಬಿಡುಗಡೆ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಬಿಲ್ಗಾರ್ತಿ ಎನಿಸಿದ್ದಾರೆ.
ಎರಡೂ ಕೈಗಳಿಲ್ಲದ ಶೀತಲ್, ಏಷ್ಯಾಡ್‌ನ ಮಹಿಳೆಯ ಕಂಪೌಂಡ್ ಮುಕ್ತ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಪ್ಯಾರಾ ಆರ್ಚರಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.
ಅರ್ಜುನ್ ಪ್ರಶಸ್ತಿಗೂ ಆಯ್ಕೆಯಾಗಿರುವ ಶೀತಲ್, ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 3 ಪದಕ ಜಯಿಸಿದ್ದು, ಪ್ಯಾರಾ ಆರ್ಚರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕಕ್ಕೆ ಕೊರಳೊಡ್ಡಿದ್ದರು.