ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿಯನ್ನು ತಪ್ಪಿಸಲು ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಸಿಎಂ ಯೋಗಿ ಆದಿತ್ಯನಾಥ್ ಹೊಸ ಯೋಜನೆಯನ್ನು ಕೈಗೊಂಡಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಡಾಡಿ ದನಗಳ ಹಾವಳಿ ಬಹುದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಪರಿಷ್ಕರಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ ಇದೀಗ 100 ದಿನಗಳಲ್ಲಿ 50,000 ಬಿಡಾಡಿ ಜಾನುವಾರುಗಳಿಗೆ ಆಶ್ರಯ ಕಲ್ಪಸುವ ಯೋಜನೆಯನ್ನು ಒಳಗೊಂಡಿದೆ. ಆರು ತಿಂಗಳಲ್ಲಿ 1 ಲಕ್ಷ ದನಗಳಿಗೆ ಆಶ್ರಯ ಯೋಜನೆಯ ಗುರಿಯನ್ನು ಹೊಂದಿದೆ. ಜಾನುವಾರುಗಳಿಗೆ ಪರಿಸರ ಸ್ನೇಹಿ ಆವಾಸಸ್ಥಾನ ಕಲ್ಪಸಲು, ರಾಜ್ಯಾದ್ಯಂತ ಗೋವು ಅಭಯಾರಣ್ಯಗಳು ಮತ್ತು ಕನಿಷ್ಠ 50 ಬೃಹತ್ ಗೋಶಾಲೆಗಳ ನಿರ್ಮಾಣ. ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಗೋಶಾಲೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದಲ್ಲದೆ, ಪ್ರತಿಯೊಬ್ಬ ಜಿಲ್ಲಾಧಿಕಾರಿಯೂ ಏಪ್ರಿಲ್ 15 ರಿಂದ ದಿನಕ್ಕೆ ಕನಿಷ್ಠ 10 ಬಿಡಾಡಿ ಹಸುಗಳಿಗೆ ಆಶ್ರಯವನ್ನು ನೀಡಬೇಕೆಂದು ಸೂಚಿಸಿದೆ.
ಅಕ್ರಮ ಗೋ ಹತ್ಯೆಗೆ ಕಡಿವಾಣ ಹಾಕಿದ ನಂತರ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಹಿಂದಿನ ಆಡಳಿತದಲ್ಲಿದ್ದಂತೆ ತ್ವರಿತ ಪರಿಹಾರಗಳನ್ನು ಹುಡುಕುವ ಬದಲು ದೀರ್ಘಾವಧಿಯ ಯೋಜನೆ ಮಾಡುವ ಆಲೋಚನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಕಾರ್ಯಸೂಚಿಯಲ್ಲಿ ಮುಂದೆ ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸುವುದು, ಹಸುವಿನ ಸಗಣಿ ಬಳಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಿಎನ್‌ಜಿ ಕಾರ್ಯ ನಡೆಸಲಾಗುವುದು. ಇದಕ್ಕಾಗಿ ರೈತರಿಂದ ಹಸುವಿನ ಸಗಣಿ ಖರೀದಿಸಲಾಗುವುದು. ಇದು ರೈತರಿಗೆ ಆದಾಯವನ್ನು ತಂದುಕೊಂಡಲಾಗುತ್ತದೆ ಎಂದು ಮೋದಿ ನೀಡಿದ್ದ ಭರವಸೆಯನ್ನು ಈಡೇರಿಸುವ ಪ್ರಯತ್ನ. ಈ ಮೂಲಕ ಬಿಡಾಡಿ ದನಗಳನ್ನು ದತ್ತು ತೆಗೆದುಕೊಳ್ಳಲು ರೈತರು ಮುಂದೆ ಬರುತ್ತಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರವು ಕಂದಾಯ ದಾಖಲೆಗಳಲ್ಲಿ ಗೋಮಾಳಕ್ಕಾಗಿ ಇರಿಸಲಾಗಿರುವ 65,000 ಹೆಕ್ಟೇರ್ ಭೂಮಿಯನ್ನು ಗುರುತಿಸಲಿದ್ದು, ಅದನ್ನು ಮೇವು ತಯಾರಿಸಲು ಮೀಸಲಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.