ಹೆಚ್ಚು ಜನ ಸೇರೋ ಕಾರ್ಯಕ್ರಮಗಳನ್ನು ಬೇರೆ ಕಡೆ ಶಿಫ್ಟ್‌ ಮಾಡಿ: ಡಿ’ಕುನ್ಹಾ ಆಯೋಗ ಶಿಫಾರಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ.

ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಆಯೋಗದ ವರದಿಯರು ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸುವ ಭವಿಷ್ಯದ ಕಾರ್ಯಕ್ರಮಗಳನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಿದೆ.

ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ವೇಳೆ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕಾರ್ಯಕ್ರಮದ ತುರ್ತು ಸ್ಥಳಾಂತರಿಸುವ ಯೋಜನೆಗಳು ಇರಬೇಕು. ಅಂತಹ ಮೂಲಸೌಕರ್ಯ ಒದಗಿಸುವವರೆ ಪ್ರಸ್ತುತ ದುರಂತ ಸಂಭವಿಸಿದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಮುಂದುವರೆಸಿದರೆ ಸಾರ್ವಜನಿಕ ಸುರಕ್ಷತೆ, ನಗರ ಚಲನಶೀಲತೆ ಮತ್ತು ತುರ್ತು ಸಿದ್ಧತೆಗೆ ಅಪಾಯಗಳನ್ನು ಒಡ್ಡುತ್ತದೆ ಎಂದು ಹೇಳಿದೆ.

ಜನಸಂದಣಿಯ ಗಾತ್ರ ಮತ್ತು ಘಟನೆಯ ಅಪಾಯದ ಮಟ್ಟವನ್ನು ಆಧರಿಸಿ, ಭವಿಷ್ಯದ ಕಾರ್ಯಕ್ರಮಗಳು, ವಿಶೇಷವಾಗಿ ಸಾರ್ವಜನಿಕರಿಗೆ ಮುಕ್ತವಾಗಿರುವ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಕನಿಷ್ಠ ಸಂಖ್ಯೆಯ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸದೆ ನಡೆಸಬಾರದು. ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ, ಸುಸಜ್ಜಿತವಾದ, ಅಪಘಾತ ಪರಿಹಾರ/ಚಿಕಿತ್ಸಾ ವಿಭಾಗದ ಸ್ಥಳ (ಟ್ರಯೇಜ್ ಪಾಯಿಂಟ್)ವನ್ನು ಸ್ಥಾಪಿಸಬೇಕು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!