ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ತನ್ನ 50ನೇ ಹುಟ್ಟುಹಬ್ಬವನ್ನು ಪತಿ ರಾಜ್ ಕುಂದ್ರಾ ಮತ್ತು ಮಕ್ಕಳೊಂದಿಗೆ ಕ್ರೊಯೇಷಿಯಾದ ಹ್ವಾರ್ ದ್ವೀಪದಲ್ಲಿ ಆಚರಿಸಿಕೊಂಡಿದ್ದಾರೆ.ಈ ನಡುವೆ ಒಂದು ವಿಡಿಯೋ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ, ಶಿಲ್ಪಾ ಮತ್ತು ಅವರ ಕುಟುಂಬ ಸ್ಥಳೀಯ ವ್ಯಕ್ತಿಯೊಂದಿಗೆ ರೆಸ್ಟೋರೆಂಟ್‌ನಲ್ಲಿ ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಇದರಿಂದಾಗಿ ನೆಟ್ಟಿಗರಲ್ಲಿ ಹೊಸ ಚರ್ಚೆ ಶುರುವಾಗಿದೆ.
ಮಾಹಿತಿಯ ಪ್ರಕಾರ, ಈ ಘಟನೆ ಜೂನ್ 9 ರಂದು ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಓರ್ವ ವಿದೇಶಿ ಯುವತಿ ಶಿಲ್ಪಾ ಮತ್ತು ಅವರ ಕುಟುಂಬದವರನ್ನು “ಸದ್ದಿಲ್ಲದೆ ಮಾತನಾಡಿ” ಎಂದು ಸೂಚನೆ ನೀಡಿದ್ದಾರೆ, ಈ ಮಾತಿಗೆ ರಾಜ್ ಕುಂದ್ರಾ ಕೋಪಗೊಂಡು ಪ್ರತಿಸ್ಪಂದಿಸಿದ್ದಾರೆ ಎನ್ನಲಾಗಿದೆ. ಅವರ ಮಾತುಗಳಲ್ಲಿ “ನಾವ್ಯಾರು ಅಂತ ಗೊತ್ತಾ?” ಎಂಬ ಮಾತು ಕೂಡ ಕೇಳಿಬಂದಿದೆ.
ಇನ್ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಶಿಲ್ಪಾ ಶೆಟ್ಟಿಯ ಮುಖ ಸ್ಪಷ್ಟವಾಗಿ ಕಾಣಿಸದಿದ್ದರೂ, ಶಿಲ್ಪಾ ಜೋರಾಗಿ ಪ್ರತಿಕ್ರಿಯಿಸುತ್ತಿರುವ ಶಬ್ದಗಳು ಕೇಳಿಬರುತ್ತವೆ.
ಈ ಘಟನೆಗೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಹಾಗಾಗಿ ಈ ವಿಡಿಯೋದಲ್ಲಿರುವ ದೃಶ್ಯಗಳು ನಿಜವೇ ಅಥವಾ ತಪ್ಪು ಅರ್ಥೈಸಲ್ಪಟ್ಟದ್ದೇ ಎಂಬುದನ್ನು ಇನ್ನೂ ದೃಢೀಕರಿಸಲಾಗಿಲ್ಲ.